Mysore
15
scattered clouds

Social Media

ಶನಿವಾರ, 31 ಜನವರಿ 2026
Light
Dark

ಎಸ್‌ಐಟಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡ ಯೂಟ್ಯೂಬರ್‌ ಅಭಿಷೇಕ್‌

ಮಂಗಳೂರು: ಯೂಟ್ಯೂಬರ್‌ನಲ್ಲಿ ಸುಳ್ಳಿ ಮಾಹಿತಿ ಪ್ರಸಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್‌ ಅಭಿಷೇಕ್‌ನನ್ನು ಎಸ್‌ಐಟಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದು, ಈ ವೇಳೆ ಲೈಕ್ಸ್‌ ಹಾಗೂ ವೀಕ್ಷಣೆಗಾಗಿ ವಿಡಿಯೋ ಮಾಡಿ ಅಪ್‌ಲೋಡ್‌ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಯುನೈಟೆಡ್‌ ಮೀಡಿಯಾ ಯೂಟ್ಯೂಬ್‌ ಚಾನಲ್‌ ನಡೆಸುತ್ತಿದ್ದ ಅಭಿಷೇಕ್‌, ಗಿರೀಶ್‌ ಮಟ್ಟಣ್ಣವರ್‌ ಸಂದರ್ಶನ ಹಾಗೂ ಸುಳ್ಳು ಮಾಹಿತಿಗಳನ್ನು ಪ್ರಸಾರ ಮಾಡಿದ್ದರು.

6 ತಿಂಗಲ ಹಿಂದೆ ಗಿರೀಶ್‌ ಮಟ್ಟಣ್ಣವರ್‌ ಸಂಪರ್ಕಿಸಿದ್ದ ಅಭಿಷೇಕ್‌ ಸುಳ್ಳು ಮಾಹಿತಿ ಪ್ರಸಾರ ಮಾಡಿದ್ದರು. ಅಲ್ಲದೇ ಪ್ರಕರಣ ದಾಖಲಾಗುವ ಮುನ್ನವೇ ವಿಡಿಯೋ ಮಾಡಿದ್ದರು.

ಇದನ್ನು ಓದಿ: ಧರ್ಮಸ್ಥಳ ವಿರುದ್ಧ ಅಪಪ್ರಚಾರ ಖಂಡಿಸಿ ಕಾಂಗ್ರೆಸ್‌ ಶಾಸಕರಿಂದ ಧರ್ಮಸ್ಥಳ ಯಾತ್ರೆ

ಸುಜಾತಾ ಭಟ್‌ ಭೇಟಿ ಅನನ್ಯಾ ಭಟ್‌ ಕಾಲ್ಪನಿಕ ಕಥೆ ಬಗ್ಗೆ ಹಾಗೂ ಬಂಗ್ಲಗುಡ್ಡಕ್ಕೆ ಭೇಟಿ ನೀಡಿ ಜಯಂತ್‌ ಹಾಗೂ ಅಭಿಷೇಕ್‌ ವಿಡಿಯೋ ಮಾಡಿದ್ದರು. ಈ ಬಗ್ಗೆಯೂ ಎಸ್‌ಐಟಿ ಅಧಿಕಾರಿಗಳು ಅಭಿಷೇಕ್‌ನನ್ನು ತೀವ್ರ ವಿಚಾರಣೆ ನಡೆಸಿದ್ದು, ಲೈಕ್ಸ್‌ ಹಾಗೂ ಹೆಚ್ಚಿನ ವೀವ್ಸ್‌ಗಾಗಿ ತಾನು ಸುಳ್ಳು ಮಾಹಿತಿ ಪ್ರಸಾರ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಅಲ್ಲದೇ ತನ್ನಿಂದ ತಪ್ಪಾಗಿದೆ ಎಂದು ವಿಚಾರಣೆ ವೇಳೆ ಕಣ್ಣೀರಿಟ್ಟಿದ್ದಾರೆ.

ಪ್ರಕರಣ ಸಂಬಂಧ ಮತ್ತಷ್ಟು ಯೂಟ್ಯೂಬರ್‌ಗಳಿಗೂ ಎಸ್‌ಐಟಿ ನೋಟಿಸ್‌ ನೀಡಲು ಸಿದ್ಧತೆ ನಡೆಸಿದೆ.

Tags:
error: Content is protected !!