Mysore
25
haze

Social Media

ಗುರುವಾರ, 29 ಜನವರಿ 2026
Light
Dark

ರಾಜ್ಯದಲ್ಲಿ ಮತ್ತೆ ಆತಂಕ: ಬೆಂಗಳೂರಿನಲ್ಲಿ ನಿಫಾಗೆ ಬಲಿಯಾದ ಕೇರಳ ಮೂಲದ ವಿದ್ಯಾರ್ಥಿ

ಬೆಂಗಳೂರು: ರಾಜ್ಯದಲ್ಲಿ ಮತ್ತೆ ನಿಫಾ ವೈರಸ್‌ ಆತಂಕ ಮನೆಮಾಡಿದ್ದು, ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿ ನಿಫಾಗೆ ಬಲಿಯಾಗಿದ್ದಾನೆ.

ಈ ಮೂಲಕ ರಾಜ್ಯಕ್ಕೆ ಈಗ ನಿಫಾ ವೈರಸ್‌ ಭೀತಿ ಎದುರಾಗಿದ್ದು, ಜನತೆ ಎಚ್ಚರಿಕೆಯಿಂದ ಇರುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಬೆಂಗಳೂರಿನಲ್ಲಿ ಕೇರಳ ಮೂಲದ 24 ವರ್ಷದ ವಿದ್ಯಾರ್ಥಿ ನಿಫಾದಿಂದ ಬಲಿಯಾಗಿದ್ದಾನೆ. ಈತ ಕೇರಳದ ಮಲಪ್ಪುರಂ ಮೂಲದ ವಿದ್ಯಾರ್ಥಿಯಾಗಿದ್ದು, ಕಾಲಿಗೆ ಬಿಟ್ಟು ಬಿದ್ದ ಕಾರಣ ಆಗಸ್ಟ್.‌25ರಂದು ಬೆಂಗಳೂರಿನಿಂದ ಕೇರಳಕ್ಕೆ ತೆರಳಿದ್ದನು ಎನ್ನಲಾಗಿದೆ.

ಬಳಿಕ ಸೆಪ್ಟೆಂಬರ್‌ 5 ರಂದು ವಿದ್ಯಾರ್ಥಿಗೆ ಜ್ವರ ಕಾಣಿಸಿಕೊಂಡು ಆತನ ಆರೋಗ್ಯ ಗಂಭೀರ ಸ್ಥಿತಿ ತಲುಪಿತ್ತು.
ಆದರೆ ಸೆಪ್ಟೆಂಬರ್‌.8ರಂದು ವಿದ್ಯಾರ್ಥಿ ನಿಫಾಗೆ ಬಲಿಯಾಗಿದ್ದಾನೆ.

ಈ ವಿದ್ಯಾರ್ಥಿ ಬೆಂಗಳೂರಿನಲ್ಲಿ 151 ಜನರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಸಂಪರ್ಕದಲ್ಲಿದ್ದ ಎಲ್ಲರ ವಿವರ ಕಲೆಹಾಕಲಾಗಿದ್ದು, ಅವರನ್ನು ಪರೀಕ್ಷೆಗೆ ಒಳಪಡಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

 

Tags:
error: Content is protected !!