ಬೆಂಗಳೂರು: ಅರವಿಂದ್ ಕೇಜ್ರಿವಾಲ್ ಅವರು ಸಾವಿರಾರು ವರ್ಷ ಇತಿಹಾಸ ಹೊಂದಿರುವ ಯಮುನಾ ನದಿಯ ಮೇಲೆ ಕಳಂಕ ತಂದಿದ್ದರು. ಅದೇ ಕಳಂಕವೇ ಇಂದಿನ ಚುನಾವಣೆಯ ಎಎಪಿ ಸೋಲಿಗೆ ಕಾರಣವಾಗಿದೆ ಎಂದು ಆರ್.ಅಶೋಕ್ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿ ಇಂದು(ಫೆಬ್ರವರಿ.8) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಸಾವಿರಾರು ಇತಿಹಾಸ ಹೊಂದಿರುವ ಯುಮನಾ ನದಿಯೂ ಒಂದು ದಿನಾನು ಮಲಿನವಾಗಿಲ್ಲ. ಆದರೆ ಕೇಜ್ರಿವಾಲ್‌ರವರು ಪ್ರತಿನಿತ್ಯ ಸಾರ್ವಜನಿಕರು ಕುಡಿಯುತ್ತಿದ್ದ ಹಾಗೂ ಗಂಗೆ ಎಂದು ಪೂಜೆ ಮಾಡುತ್ತಿದ್ದ ನೀರಿನ ಮೇಲೆಯೇ ಕಳಂಕ ತಂದು ಬಿಟ್ಟರು. ಸ್ವಚ್ಛತೆ ಮಾಡುವ ಕೆಲಸ ನದಿಯದ್ದಲ್ಲ, ಕೇಜ್ರಿವಾಲ್ ಸರಿಯಾಗಿ ನಿರ್ವಹಣೆ ಮಾಡದೇ ನದಿ ಮೇಲೆ ಆಪಾದನೆ ಮಾಡಿದ್ದರು. ಅದೇ ಅವರ ಪಕ್ಷದ ಸೋಲಿಗೆ ಕಾರಣವಾಗಿದೆ ಎಂದರು.
ಅರವಿಂದ್ ಕೇಜ್ರಿವಾಲ್ ಅವರು ಜೈಲಿನಲ್ಲಿದ್ದುಕೊಂಡು ಎರಡು ತಿಂಗಳು ಆಡಳಿತ ಸ್ಥಗಿತಗೊಳಿಸಿದರು. ಎಎಪಿ ಪಕ್ಷದವರಿಗೆ ಯಮುನಾ ನದಿಯ ಶಾಪ ತಟ್ಟಿದೆ. ಇನ್ನೂ ಎಎಪಿ ಪಕ್ಷದವರು ಕಾರು, ಮಫ್ಲರ್, ನಿಮಿಷ ನಿಮಿಷಕ್ಕೂ ಕೆಮ್ಮೋದು, ಎರಡು ಬೆಡ್‌ರೂಮ್ ಫ್ಲಾಟ್, ಅಲ್ಲದೇ ಈಗ ಶೀಷ್ ಮಹಲ್‌ನಲ್ಲಿ 25 ರೂಮ್ ಹಾಗೂ ಎಸ್ಕಾರ್ಟ್ ಹೀಗೆ ರಾಜನ ರೀತಿಯ ಆಡಳಿತವನ್ನು ನೋಡಿ ಸಾರ್ವಜನಿಕರು ಬೇಸತ್ತಿದ್ದರು. ಹೀಗಾಗಿ ಬಿಜೆಪಿಗೆ ಗೆಲುವಾಗಿದೆ ಎಂದು ಹೇಳಿದರು.





