Mysore
15
clear sky

Social Media

ಗುರುವಾರ, 25 ಡಿಸೆಂಬರ್ 2025
Light
Dark

ಇನ್ಸ್ಟಾಗ್ರಾಂನಲ್ಲಿ ಲವ್; ಓಡಿ ಹೋಗಿ ಮದುವೆಯಾಗಿದ್ದ ಮೈಸೂರು ಮೂಲದ ಮಹಿಳೆ ಸಾವು

ಬೆಳಗಾವಿ : ಇನ್ಸ್ಟಾಗ್ರಾಂ ನಲ್ಲಿ ರೀಲ್ಸ್‌ ಮಾಡುತ್ತ ಪರಿಚಯವಾಗಿದ್ದವನ ಜೊತೆ ಪ್ರೀತಿಯಲ್ಲಿ ಬಿದ್ದು ಓಡಿ ಹೋಗಿ ಮದುವೆಯಾಗಿದ್ದ ಮೈಸೂರು ಮೂಲದ ಮಹಿಳೆ ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.

ಮೈಸೂರಿನ ಕುಂಬಾರಕೊಪ್ಪಲಿನ ಮಂಜುಳ ಅಲಿಯಾಸ್ ನಯನಾ ಎಂಬ ಮಹಿಳೆಗೆ ಬೆಳಗಾವಿ ತಾಲೂಕಿನ ಮಚ್ಚೆ ಗ್ರಾಮದ ನಿವಾಸಿ ಬೋರೇಶ್‌ ಜೊತೆ ಪ್ರೀತಿಯಾಗಿದೆ. ಇನ್ಸ್ಟಾಗ್ರಾಂನಲ್ಲಿ ರೀಲ್ಸ್‌ ಮಾಡುತ್ತ ಪರಿಚಯವಾಗಿದ್ದ ಇವರಿಬ್ಬರೂ ಮೊದಲು ಸ್ನೇಹವಾಗಿ ನಂತರ ಇಬ್ಬರಿಗೂ ಪ್ರೀತಿ ಉಂಟಾಗಿ ಮದುವೆಯಾಗಲು ನಿರ್ಧರಿಸಿದ್ರು.  ಹೀಗಾಗಿ ಮಂಜುಳ ತನ್ನ ಊರು, ಮನೆ, ತಂದೆ ತಾಯಿ ಎಲ್ಲರನ್ನು ಬಿಟ್ಟು ಬೆಳಗಾವಿಗೆ ಬಂದು ಬೋರೇಶ್‌ ಜೊತೆ ಮದುವೆಯಾಗುತ್ತಾಳೆ.  ಈ ವಿಚಾರ ತಿಳಿದು ಮಂಜುಳ ಪೋಷಕರು ಬೆಳಗಾವಿಗೆ ಬಂದು ಆಕೆಯನ್ನ ಮೈಸೂರಿಗೆ ಕರೆದುಕೊಂಡು ಹೋಗುತ್ತಾರೆ. ಆದರೆ ಮತ್ತೆ ಮಂಜುಳ ಮನೆ ಬಿಟ್ಟು ಬಂದು ಗಂಡನ ಜೊತೆ ಜೀವನ ಮಾಡುತ್ತಾಳೆ.

ಒಂದು ವರ್ಷ ಸುಖವಾಗಿದ್ದ ಈ ಸಂಸಾರದಲ್ಲಿ ಇತ್ತೀಚೆಗೆ ಬಿರುಕು ಬಿಟ್ಟಿದೆ. ೧ ವರ್ಷದ ಹಿಂದೆಯಷ್ಟೆ ಮದುವೆಯಾಗಿದ್ದ ಮಂಜುಳಾ ೩ ತಿಂಗಳ ಗರ್ಭಿಣಿಯಾಗಿದ್ದು ಇದು ಗಂಡನಿಗೆ ಇಷ್ಟವಿರಲಿಲ್ಲವಂತೆ. ಮಂಜುಳಾಗೆ ಗರ್ಭಪಾತ ಮಾಡಿಸಿಕೊಳ್ಳುವಂತೆ ಗಂಡ ಹಾಗೂ ಆತನ ಕುಟುಂಬಸ್ಥರು ಒತ್ತಡ ಹೇರಿದ್ದರು ಎಂದು ಮಂಜುಳಾ ತನ್ನ ಚಿಕ್ಕಮ್ಮನ ಬಳಿ ಅಳಲು ತೋಡಿಕೊಂಡಿದ್ದಳು. ಆದರೆ ಈಗ ಮಂಜುಳಾ ಶವವಾಗಿ ಪತ್ತೆಯಾಗಿದ್ದು, ಆಕೆಯ ಪತಿ ಮತ್ತು ಕುಟುಂಬದವರು ಉಸಿರುಗಟ್ಟಿಸಿ ನನ್ನ ಮಗಳನ್ನು ಕೊಲೆ ಮಾಡಿದ್ದಾರೆಂದು ಮಂಜುಳಾ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಇನ್ನು ಈ ಕುರಿತು ಬೆಳಗಾವಿಯ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:
error: Content is protected !!