ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ 17ಆರೋಪಿಗಳು ಜೈಲು ಸೇರಿದ್ದು. ಈ ಪೈಕಿ ಈಗಾಗಲೇ 3ಜನರಿಗೆ ಜಾಮೀನು ಮಂಜೂರಾಗಿದೆ. ಸೆ.27ರಂದು ದರ್ಶನ್ ಅರ್ಜಿ ವಿಚಾರಣೆ ನಡೆಸಿ, ಸೆ.30ಕ್ಕೆ (ಅಂದರೆ ಇಂದು) ಮುಂದೂಡಿತ್ತು. ಹೀಗಾಗಿ ಇಂದು ದರ್ಶನ್ ಪರ ಅರ್ಜಿ ವಿಚಾರಣೆ ನಡೆಯಲಿದೆ.
ಈ ನಡುವೆ ದರ್ಶನ್ ಬಿಡುಗಡೆಯಾದರೆ ಬೆಂಗಳೂರಿಗೆ ಕರೆತರಲು ಹೆಲಿಕಾಪ್ಟರ್ ಬುಕ್ ಮಾಡಿರುವ ಅಪ್ಡೇಟ್‌ವೊಂದು ಸಿಕ್ಕಿದೆ. ಇಂದಿನ ವಿಚಾರಣೆಯಲ್ಲಿ ದರ್ಶನ್ ಬಿಡುಗಡೆಯಾಗಲಿದ್ದಾರೆ ಎನ್ನುವ ಭರವಸೆಯಿಂದ ಬಳ್ಳಾರಿಯಿಂದ ಬೆಂಗಳೂರಿಗೆ ಹೆಲಿಕಾಪ್ಟರ್ ಅನ್ನು ಕಾಯ್ದಿರಿಸಲಾಗಿದೆ ಎನ್ನಲಾಗಿದೆ.
ಬೆಂಗಳೂರು ಪರಪ್ಪನ ಆಗ್ರಹಾರದಲಿದ್ದ ದಾಸ ಬಳ್ಳಾರಿಯ ಸೆಂಟ್ರಲ್ ಜೈಲು ಸೇರಿದ್ದಾರೆ. ಇತ್ತ ಬಿಡುಗಡೆಗೆ ಪತ್ನಿ ವಿಜಯಲಕ್ಷ್ಮಿಹಾಗೂ ಕುಟುಂಬ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಅಭಿಮಾನಿಗಳು ಕೂಡ ನೆಚ್ಚಿನ ನಟನ ಬಿಡುಗಡೆಗೆ ಕಾತರದಿಂದ ಕಾಯುತ್ತಿದ್ದಾರೆ. ಹೀಗಾಗಿ, ದರ್ಶನ್ ಬಿಡುಗಡೆ ಆದ ಮೇಲೆ ಬೆಂಗಳೂರಿಗೆ ರಸ್ತೆ ಮೂಲಕ ಕರೆತಂದರೆ ಅಭಿಮಾನಿಗಳ ದಂಡು ನೆರೆಯುತ್ತದೆ ಎಂದು ವಿಜಯಲಕ್ಷ್ಮಿ ಅವರು ಹೆಲಿಕಾಪ್ಟರ್ ಬುಕ್ ಮಾಡಿದ್ದಾರೆ ಎಂದು ಅವರ ಆಪ್ತ ಮೂಲಗಳಿಂದ ತಿಳಿದುಬಂದಿದೆ.