Mysore
27
scattered clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಇನ್‌ಸ್ಟಾದಲ್ಲಿ ದರ್ಶನ್‌ ಅನ್‌ಫಾಲೋ, ಡಿಪಿ ಡಿಲೀಟ್‌ ಮಾಡಿದ ಪತ್ನಿ ವಿಜಯಲಕ್ಷ್ಮಿ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಅರೆಸ್ಟ್‌ ಆಗಿದ್ದಾರೆ. ಪವಿತ್ರಾ ಗೌಡ ವಿಚಾರದಲ್ಲಿ ಸೋಶಿಯಲ್‌ ಮೀಡಿಯಾಗಳ ಮೂಲಕ ಆಗಾಗಿ ಸಮರ ಸಾರುತ್ತಿದ್ದ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಅವರು ಈ ಬಾರಿ ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾಗಿದ್ದಾರೆ.

ಹೀಗಿರುವಾಗಲೇ ವಿಜಯಲಕ್ಷ್ಮಿಯವರು ನಟ ದರ್ಶನ್‌ ಅವರನ್ನು ಇನ್‌ಸ್ಟಾದಲ್ಲಿ ಆನ್‌ಫಾಲೋ ಮಾಡಿದ್ದಾರೆ. ಇದರ ಜೊತೆಗೆ ಇನ್‌ಸ್ಟಾ ಖಾತೆಯ ಡಿಪಿಯನ್ನು ಸಹ ಡಿಲೀಟ್‌ ಮಾಡಿದ್ದಾರೆ.

ಪವಿತ್ರಾಗೌಡ ವಿಚಾರದಲ್ಲಿ ವಿಜಯಲಕ್ಷ್ಮಿ ಈ ಹಿಂದೆ ಸಾಕಷ್ಟು ಬಾರಿ ಸಾಮಾಜಿಕ ಜಾಲತಾಣದಲ್ಲಿ ಕಿತ್ತಾಟ ನಡೆಸಿದ್ದಾರೆ. ಈ ಬಾರಿಯೂ ಪವಿತ್ರಾ ವಿಚಾರವಾಗಿಯೇ ದುರಂತ ನಡೆದುಹೋಗಿದೆ. ಈ ಹಿನ್ನಲೆ ಪತ್ನಿ ವಿಜಯಲಕ್ಷ್ಮಿಗೆ ಕೆಟ್ಟ ಕೋಪ ಬಂದಿರುತ್ತೆ. ಆದರೂ ತಾಳ್ಮೆ ವಹಿಸಿಕೊಂಡು ಮೌನಕ್ಕೆ ಜಾರಿದ್ದಾರೆ ಎನ್ನಲಾಗುತ್ತಿದೆ.

 

 

 

 

 

Tags: