ಬೆಂಗಳೂರು: ಲೋಕಸಭಾ ಚುನಾವಣೆ ಸಂಬಂಧ ರಾಜ್ಯ ರಾಜಕಾರಣದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಇದೀಗ ಮೈತ್ರಿ ಬಗ್ಗೆ ಅಪಸ್ವರ ಕೇಳಲಾರಂಭಿಸಿದೆ.
ಬೆಂಗಳೂರಿನಲ್ಲಿಂದು ಜೆಡಿಎಸ್ ಕೋರ್ ಕಮಿಟಿ ಸಭೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೋಲಾರ ಕ್ಷೇತ್ರವನ್ನು ಬಿಟ್ಟುಕೊಡಲು ಬಿಜೆಪಿ ವರಿಷ್ಠರು ಹಿಂದೇಟು ಹಾಕುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೀಟು ಹೊಂದಾಣಿಕೆ ಬಗ್ಗೆ ಮಾತುಕತೆಗೆ ಕೂತಾಗ ತಾವು ಬೇಡಿಕೆ ಇಟ್ಟಿದ್ದು ಕೇವಲ 3-4 ಸೀಟುಗಳಿಗೆ ಮಾತ್ರ. ತಮ್ಮ ಸಾಮರ್ಥ್ಯದ ಬಗ್ಗೆ ಸಂಪೂರ್ಣ ಅರಿವಿದೆ ಮತ್ತು ಬಿಜೆಪಿಗೂ ಅದು ಗೊತ್ತಿದೆ. ಹಾಸನ ಮತ್ತು ಮಂಡ್ಯದಲ್ಲಿ ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧಿಸಿದರೂ ಗೆಲ್ಲುತ್ತದೆ. ಕೇವಲ ಎರಡು ಸೀಟುಗಳಿಗಾಗಿ ತಾನು ಇಷ್ಟೆಲ್ಲ ಪ್ರಯತ್ನ, ಹೋರಾಟ ಮಾಡಬೇಕಿತ್ತೇ? ಎಂದು ಕುಮಾರಸ್ವಾಮಿ ಬೇಸರದಲ್ಲಿ ಪ್ರಶ್ನಿಸಿದರು.
ಕರ್ನಾಟಕದ ರಾಜಕಾರಣವೇ ಬೇರೆ ಭಾರತದ ಉಳಿದ ಭಾಗಗಳಲ್ಲಿನ ರಾಜಕೀಯ ಚಿತ್ರಣವೇ ಬೇರೆ, ರಾಜ್ಯದ 18 ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಕಾರ್ಯಕರ್ತರ ಶ್ರಮವೇ ಬಿಜೆಪಿಗೆ ನೆರವಾಗಲಿದೆ ಎಂದು ಎಚ್‌ಡಿಕೆ ಹೇಳಿದರು.





