ಬೆಂಗಳೂರು: ಖಾಸಗಿ ಶಾಲೆಗಳಿಗೆ ಬಂದ ಹುಸಿ ಬಾಂಬ್ ಕರೆ ರಾಜ್ಯದ ರಾಜಧಾನಿ ಬೆಂಗಳೂರನ್ನು ಬೆಚ್ಚಿಬೀಳಿಸಿತ್ತು. ಬೆಂಗಳೂರು ಗ್ರಾಮಾಂತರ ಸೇರಿದಂತೆ 64 ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿತ್ತು. ಕೂಡಲೆ ಎಚ್ಚೆತ್ತ ಪೊಲೀಸ್ ಸಿಬ್ಬಂಧಿ ಕೃತ್ಯವೆಸೆಗಿದವರ ಜಾಲ ಪತ್ತೆ ಮಾಡಲು ಮುಂದಾಗಿದ್ದಾರೆ.
ಮುಖ್ಯವಾಗಿ ಬೆದರಿಕೆ ಇಮೇಲ್ನಲ್ಲಿ ಉಗ್ರವಾದ ಪದಗಳ ಉಲ್ಲೇಖವಾಗಿದ್ದರಿಂದ ಆತಂಕಕ್ಕೆ ಕಾರಣವಾಗಿದೆ. ಶಾಲೆಗಳಿಗೆ ಬಾಂಬ್ ಬೆದರಿಕೆಯನ್ನ ಇಮೇಲ್ ಐಡಿಗಳ ಮೂಲಕ ಕಳುಹಿಸಿಲಾಗಿದ್ದು, ಎಲ್ಲಾ ಇಮೇಲ್ ಗಳನ್ನ kharijites@beeble.com ನಿಂದ ಕಳುಹಿಸಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಇಮೇಲ್‌ಗಳು ಜೆಕ್ ರಿಪಬ್ಲಿಕ್ ಮತ್ತು ಸ್ಲೋವಾಕಿಯಾದಿಂದ ಹುಟ್ಟಿಕೊಂಡಿವೆ ಎಂದು ಶಂಕಿಸಲಾಗಿದೆ.
ಶುಕ್ರವಾರದ ಘಟನೆಯಲ್ಲಿ, ಬಾಂಬ್ ಬೆದರಿಕೆಯ ಮೇಲ್ ಗಮನಕ್ಕೆ ಬಂದ ಮೊದಲ ಶಾಲೆಗಳಲ್ಲಿ ಒಂದಾಗಿದೆ ಪೂರ್ವ ಬೆಂಗಳೂರಿನ ವೈಟ್‌ಫೀಲ್ಡ್‌ನ ಯೆಮ್ಲೂರಿನ ನೀವ್ ಅಕಾಡೆಮಿ. ಬೆಳಗ್ಗೆ 8 ಗಂಟೆ ಸುಮಾರಿಗೆ ಪಶ್ಚಿಮ ಬೆಂಗಳೂರಿನ ಬಸವೇಶ್ವರ ನಗರ, ಕೆಂಗೇರಿ ಮತ್ತು ಉತ್ತರದ ಯಲಹಂಕದ ಹೆಚ್ಚಿನ ಶಾಲೆಗಳು ಬೆದರಿಕೆ ಇಮೇಲ್‌ಗಳು ಬಂದಿರುವ ಬಗ್ಗೆ ಪೊಲೀಸರಿಗೆ ಎಚ್ಚರಿಕೆ ನೀಡಿವೆ. ತನಿಖೆ ಚುರುಕುಗೊಳಿಸಿರುವ ಪೊಲೀಸರು, ತನಿಖೆ ತೀವ್ರಗೊಳಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಹೇಳಿದ್ದಾರೆ.