ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ 2025-26ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಕ್ರೀಡಾ ಕ್ಷೇತ್ರಕ್ಕೆ ಸಿಕ್ಕಿದ್ದೇನು? ಎಂಬುದರ ಚಿತ್ರಣ ಇಲ್ಲಿದೆ.
ವಿಧಾನಸೌಧದಲ್ಲಿ ಇಂದು(ಮಾರ್ಚ್.7) ಬಜೆಟ್ ಮಂಡಿಸಿದ ಅವರು, ಕ್ರೀಡಾ ಕ್ಷೇತ್ರಕ್ಕೆ ಭರ್ಜರಿ ಗಿಫ್ಟ್ ನೀಡಿದ್ದು, ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ಭದ್ರ ಬುನಾದಿ ಹಾಕಿ ಅನುದಾನವನ್ನು ಮೀಸಲಿಡಲಾಗಿದೆ ಎಂದು ಹೇಳಿದು.
ಅವುಗಳು ಈ ಕೆಳಕಂಡಂತಿವೆ.
1. ಗುರಿ-ಒಲಿಂಪಿಕ್ ಪದಕ ಯೋಜನೆ: 60 ಕ್ರೀಡಾಪಟುಗಳಿಗೆ ಪ್ರೋತ್ಸಾಹ ಧನ.
2. ಕ್ರೀಡಾಂಗಣ ನಿರ್ಮಾಣ: 20 ಎಕರೆ ನವೀಕರಿಸುವ ಯೋಜನೆ.
3. ಕ್ರೀಡಾಂಗಣ ಅಭಿವೃದ್ಧಿ: ದಕ್ಷಿಣ ಕನ್ನಡ ಮತ್ತು ಉಡುಪಿ 6 ಕೋಟಿ.
4. ತಾಲ್ಲೂಕು ಕ್ರೀಡಾಂಗಣ ನಿರ್ಮಾಣ: 12 ತಾಲ್ಲೂಕುಗಳಿಗೆ 12 ಕೋಟಿ ರೂ.
5. ಕ್ರೀಡಾ ರೇಂಜ್ ನಿರ್ಮಾಣ: 3 ವರ್ಷಗಳಲ್ಲಿ 3 ಕೋಟಿ ವೆಚ್ಚ.
6. ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ: 2 ಕೋಟಿ ರೂ. ಮೀಸಲು.
7. ಕೋಡಿಗೆ ಕ್ರೀಡಾ ಶಾಲೆ: 3 ಕೋಟಿ ರೂ. ಉನ್ನತೀಕರಣ.
8. ಯಾದಗಿರಿಯ ಕ್ರೀಡಾ ವಸತಿ ಶಾಲೆ: 10 ಕೋಟಿ ರೂ. ಪ್ರಾರಂಭ.
9. ಕ್ರೀಡಾ ವಿಜ್ಞಾನ ಕೇಂದ್ರ: ಮೈಸೂರು, ಬೆಳಗಾವಿ 7 ಕೋಟಿ.
10. ಈಜು ಕೊಳಗಳು ನವೀಕರಣ: 2 ಕೋಟಿ ರೂ. ನಿರ್ಮಾಣ.
11. ಕ್ರೀಡಾಪಟುಗಳಿಗೆ ಹಾಜರಾತಿ ವಿನಾಯಿತಿ: 15% ಮತ್ತು 25% ವಿನಾಯಿತಿ.
12. ಆಟದ ಮೈದಾನ ನಿರ್ಮಾಣ: 100 ಶಾಲೆಗೆ 5 ಲಕ್ಷ ರೂ.
13. ನಿವೃತ್ತಿ ಕ್ರೀಡಾಪಟುಗಳ ಮಾಸಾಶನ ಹೆಚ್ಚಣೆ: 6,000, 5,000, 4,500 ರೂ.
14. ಪದಕ ವಿಜೇತರಿಗೆ ಮಾರ್ಗದರ್ಶನ: 1.ಒಲಿಂಪಿಕ್ಸ್, ಕಾಮನ್‌ವೆಲ್ತ್, ಏಷಿಯನ್.
15. ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕು ಅಭಿವೃದ್ಧಿಗೆ 6 ಕೋಟಿ ರೂ. ಮೀಸಲಿರಿಸಲಾಗಿದೆ ಎಂದು ತಿಳಿಸಿದರು.





