Mysore
22
overcast clouds

Social Media

ಗುರುವಾರ, 18 ಡಿಸೆಂಬರ್ 2025
Light
Dark

ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಕಿಚ್ಚ ಸುದೀಪ್‌ ಹೇಳಿದ್ದೇನು?

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಹಾಗೂ ಗ್ಯಾಂಗ್‌ ಈಗಾಗಲೇ ಜೈಲು ಸೇರಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಕಿಚ್ಚ ಸುದೀಪ್‌ ಅವರು ಇಂದು(ಜೂ.16) ಬೆಂಗಳೂರಿನಲ್ಲಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಬಾಳಿ ಬದುಕಬೇಕಿದ್ದ ರೇಣುಕಾಸ್ವಾಮಿ ಕೊಲೆಯಾಗಿದ್ದಾರೆ. ಅವರ ಪತ್ನಿ ಹಾಗೂ ಹುಟ್ಟುವ ಮಗುವಿಗೆ ನ್ಯಾಯ ಸಿಗಬೇಕು. ಮಾಧ್ಯಮದಲ್ಲಿ ತೋರಿಸುತ್ತಿರುವುದನ್ನು ನೋಡಿ ಎಲ್ಲ ಮಾಹಿತಿ ತಿಳಿದುಕೊಂಡಿದ್ದೇನೆ. ಸತ್ಯ ಹೊರ ಬರಬೇಕು ಅಂತ ಪೊಲೀಸ್‌ ಹಾಗೂ ಮಾಧ್ಯಮದವರು ಕೆಲಸ ಮಾಡುತ್ತಿದ್ದಾರೆ. ಅವರ ಪರ, ಇವರ ಪರ ಮಾತನಾಡುವುದು ತಪ್ಪಾಗುತ್ತದೆ. ಕಾನೂನಿನ ಮೇಲೆ ಜನರಿಗೆ ನಂಬಿಕೆ ಬರುವಂತಹ ಕೆಲಸ ಆಗಲಿ ಎಂದು ಹೇಳಿದ್ದಾರೆ.

ಯಾರಿಗೆ ಅನ್ಯಾಯವಾಗಿದೆ ಅವರಿಗೆ ನ್ಯಾಯ ಸಿಗಲಿ. ಹುಟ್ಟುವ ಮಗು ಹಾಗೂ ಕುಟುಂಬಕ್ಕೆ ನ್ಯಾಯ ಸೀಗಬೇಕಿದೆ. ಚಿತ್ರರಂಗದ ಸಂಪೂರ್ಣ ವಾತಾವರಣ ಸದ್ಯ ಸರಿಯಾಗಿಲ್ಲ. ಕನ್ನಡ ಚಿತ್ರರಂಗಕ್ಕೆ ನ್ಯಾಯ ಸಿಗಬೇಕು. ಚಿತ್ರರಂಗದ ಮೇಲೆ ಕಪ್ಪುಚುಕ್ಕೆ ಬರೋದು ನಮಗೆ ಇಷ್ಟವಿಲ್ಲ. ಈ ಚಿತ್ರರಂಗವನ್ನು ಎಷ್ಟೋ ಜನರು ಕಟ್ಟಿ ಬೆಳಸಿದ್ದಾರೆ. ಅದನ್ನು ನಾವು ಕಾಪಾಡಿಕೊಂಡು ಹೋಗಬೇಕು. ಇಡೀ ಚಿತ್ರರಂಗಕ್ಕೆ ನ್ಯಾಯ ಸಿಗಬೇಕಾಗಿದೆ ಎಂದರು.

ಯಾರನ್ನು ಬ್ಯಾನ್‌ ಮಾಡುವ ವಿಚಾರ ಇಲ್ಲ, ಆ ಸಂಸ್ಕೃತಿ ನಮ್ಮಲ್ಲಿಲ್ಲ. ನಮಗೆ ಬ್ಯಾನ್‌ ಮುಖ್ಯವಲ್ಲ, ನ್ಯಾಯ ಮುಖ್ಯ ಎಂದು ನಟ ಕಿಚ್ಚ ಸುದೀಪ್‌ ಹೇಳಿದ್ದಾರೆ.

Tags:
error: Content is protected !!