ಬೆಂಗಳೂರು: ಈ ಬಾರಿ ವಾಡಿಕೆಗಿಂತ ಮೊದಲೇ ಮುಂಗಾರು ಆಗಮನವಾಗಲಿದೆ ಎಂದು ಹಮಾಮಾನ ಇಲಾಖೆ ಸೂಚನೆ ನೀಡಿರುವ ಬೆನ್ನಲ್ಲೇ ರೈತರಿಗೆ ಮತ್ತೊಂದು ಗುಡ್‌ನ್ಯೂಸ್ ಸಿಕ್ಕಿದೆ.
ಕಳೆದ ಬಾರಿಗಿಂತ ಈ ಬಾರಿ ಬಿತ್ತನೆ ಬೀಜಗಳ ದರದಲ್ಲಿ ಶೇಕಡಾ 40ರಷ್ಟು ಇಳಿಕೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಬರ ಆವರಿಸಿದ್ದ ಕಾರಣಕ್ಕೆ ಬಿತ್ತನೆ ಬೀಜಗಳ ಉತ್ಪಾದನೆ ಕುಂಠಿತವಾಗಿ ಬೆಲೆಗಳು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದವು. ಇದರಿಂದ ರೈತರಿಗೆ ಬೆಲೆ ಏರಿಕೆ ಬಿಸಿ ತಟ್ಟಿತ್ತು. ಆದರೆ ಈ ಬಾರಿ ಗಣನೀಯವಾಗಿ ಬಿತ್ತನೆ ಬೀಜಗಳ ದರವನ್ನು ಇಳಿಕೆ ಮಾಡಲಾಗಿದೆ.
ಹೆಸರು ಕಾಳು ಕೆಜಿಗೆ 186 ರೂನಿಂದ 140ರೂಗೆ ಇಳಿಕೆಯಾಗಿದೆ. ಕಡಲೆ ಬೀಜ 102 ರೂನಿಂದ 99ರೂ, ಸಿರಿಧಾನ್ಯಗಳು 117ರೂನಿಂದ 69 ರೂ, ತೊಗರಿ 178 ರೂ ನಿಂದ 142ರೂ, ಸೂರ್ಯಕಾಂತಿ 842ರೂನಿಂದ 770ರೂ, ಸೋಯಾಬೀನ್ 77 ರೀ 75ರೂ, ಉದ್ದಿನಕಾಳು 157ರೂನಿಂದ 138ರೂ, ಬಟಾಣಿ 135 ರೂನಿಂದ 130ರೂಗೆ ಇಳಿಕೆಯಾಗಿದೆ.
ನವಣೆ, ಊದಲು ದರ ಕೆಜಿಗೆ 117 ರೂನಿಂದ 69.60ರೂಗೆ ಇಳಿಕೆಯಾಗಿದೆ. ಇನ್ನು ನಾನಾ ವಿಧದ ಭತ್ತದ ದರ ಕಳೆದ ವರ್ಷ ಕೆಜಿಗೆ 40 ರೂನಿಂದ 69ರೂಗೆ ಇಳಿಕೆಯಾಗಿದೆ. ನಾನಾ ವಿಧದ ಭತ್ತದ ತಳಿಗಳ ದರ ಕಳೆದ ವರ್ಷ ಕೆಜಿಗೆ 40ರಿಂದ 45ರೂವರೆಗೆ ಇತ್ತು. ಈ ಬಾರಿ 40 ರೂನಿಂದ ಗರಿಷ್ಠ 49 ರೂಪಾಯಿವರೆಗೆ ಇದೆ.





