Mysore
21
broken clouds

Social Media

ಗುರುವಾರ, 13 ಮಾರ್ಚ್ 2025
Light
Dark

ವಕ್ಫ್‌ ವಿರುದ್ಧ ಪಕ್ಷಾತೀತವಾಗಿ ಹೋರಾಟ ಮಾಡುತ್ತೇವೆ: ಶಾಸಕ ರಮೇಶ್‌ ಜಾರಕಿಹೊಳಿ

ಬಳ್ಳಾರಿ: ವಕ್ಫ್‌ ಮಂಡಳಿ ವಿರುದ್ಧ ಪಕ್ಷಾತೀತವಾಗಿ ಹೋರಾಟ ಮಾಡುತ್ತೇವೆ ಎಂದು ಶಾಸಕ ರಮೇಶ್‌ ಜಾರಕಿಹೊಳಿ ಹೇಳಿದ್ದಾರೆ.

ಈ ಬಗ್ಗೆ ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್‌ ವಿವಾರವಾಗಿ ಪಕ್ಷಾತೀತವಾಗಿ ಎಲ್ಲಾ ಕಡೆ ಹೋರಾಟ ನಡೆಯುತ್ತಿದೆ. ಆದರೆ ನಮ್ಮದು ಯತ್ನಾಳ್‌ ಬಣ ಎಂದು ಎಲ್ಲರೂ ಕರೆಯುತ್ತಿದ್ದಾರೆ. ಆದರೆ ನಾವು ಯತ್ನಾಳ್‌ ಬಣವಲ್ಲ. ಇರೋದು ಕೇವಲ ಒಂದೇ ಬಣ, ಅದು ಬಿಜೆಪಿ ಬಣ ಎಂದರು.

ಇನ್ನು ನಾವು ಬಿಜೆಪಿ ಬಣದಿಂದ ಹೋರಾಟ ಮಾಡಿದ ಬಳಿಕ ಎಲ್ಲರೂ ಬಂದರು. ಜೆಸಿಪಿ ಸಮಿತಿ ಬಂತು, ಎಲ್ಲವೂ ಬಂತು. ಆದರೆ ಮಾಧ್ಯಮಗಳಲ್ಲಿ ಕೆಲವುಗಳನ್ನು ಬಿಂಬಿಸಲಾಗುತ್ತಿದೆ ಎಂದು ಬಣ ಬಡಿದಾಟ ಕುರಿತು ಸ್ಪಷ್ಟನೆ ನೀಡಿದರು.

ಇನ್ನು ಮುಂದುವರಿದು ಮಾತನಾಡಿದ ಅವರು, ವಕ್ಫ್‌ ಬೋರ್ಡ್‌ ವಿಚಾರದಲ್ಲಿ ಎರಡನೇ ಹಂತದ ಹೋರಾಟ ಮಾಡುತ್ತೇವೆ. ಜನವರಿ.4ರಂದು ಬಳ್ಳಾರಿಯ ಕಂಪ್ಲಿಯಲ್ಲಿ ಸಮಾವೇಶ ಮಾಡುತ್ತೇವೆ. ಜನವರಿ.6ರಂದು ಕೂಡ ಹೋರಾಟ ನಡೆಯಲಿದೆ ಎಂದು ಎಚ್ಚರಿಕೆ ನೀಡಿದರು.

ಇನ್ನು ವಕ್ಫ್‌ ವಿಚಾರದಲ್ಲಿ ಹಿಂದು-ಮುಸ್ಲಿಂ ಸಮುದಾಯದವರಿಗೆ ಅನ್ಯಾಯವಾಗಿದೆ. ವಕ್ಫ್‌ ಕಾಯ್ದೆ ಸಂಪೂರ್ಣವಾಗಿ ತೊಲಗಬೇಕು ಎಂದು ನಾವು ಹೋರಾಟ ಮಾಡುತ್ತೇವೆ. ಪಕ್ಷಾತೀತವಾಗಿ ನಾವು ಹೋರಾಟ ಮಾಡುತ್ತೇವೆ. ಬಿಜೆಪಿ ಕಚೇರಿಗಳಲ್ಲಿ ಮುಂದೆ ನಾವು ಸಭೆಗಳನ್ನು ಸಹ ಮಾಡುತ್ತೇವೆ ಎಂದು ತಿಳಿಸಿದರು.

 

Tags: