ಬೆಂಗಳೂರು: ಎಚ್‌ಡಿ ಕುಮಾರಸ್ವಾಮಿಯಿಂದ ತೆರವಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದ್ದು, ಜೆಡಿಎಸ್ ನಾಯಕರೊಂದಿಗೆ ಚರ್ಚಿಸಿ ಅಭ್ಯರ್ಥಿ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.
ಪಕ್ಷದ ಕಚೇರಿಯಲ್ಲಿಂದು ಮಾತನಾಡಿದ ಅವರು, ಶಾಸಕರಾಗಿರುವ ಡಿಕೆ ಶಿವಕುಮಾರ್ ಅವರು ಚನ್ನಪಟ್ಟಣದ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಆದರೆ ಜನರ ಮನಸಿನಲ್ಲೇನಿದೆ ಎಂಬುದು ನಿಗೂಢವಾಗಿದೆ. ಗ್ರಾಮಾಂತರದಲ್ಲಿ ಅವರನ್ನು ಸೋಲಿಸುವವರು ಇಲ್ಲವೇ ಇಲ್ಲ ಎನ್ನುತ್ತಿದ್ದರು ಈಗ ಜನರ ತೀರ್ಪು ಏನೆಂಬುದನ್ನು ಎಲ್ಲರೂ ನೋಡುತ್ತಿದ್ದಾರೆ ಎಂದರು.
ಬಿಎಸ್‌ವೈ ಅವರಿಂದ ದಾವಣಗೆರೆ ಬಿಜೆಪಿ ಅಭ್ಯರ್ಥಿಗೆ ಸೋಲಾಯಿತು ಎಂಬ ಶಾಸಕ ಬಿ.ಪಿ ಹರೀಶ್ ಹೇಳಿಕೆಗೆ ಈ ರೀತಿಯ ಹೇಳಿಕೆಗಳು ಪಕ್ಷ ಹಾಗೂ ಸಂಘಟನೆಗೆ ಲಾಭವಾಗುವುದಿಲ್ಲ ಎಂದು ಖಾರವಾಗಿ ಹೇಳಿದರು.