ತುಮಕೂರು : ಹಾಲಿನ ದರ, ಪೆಟ್ರೋಲ್-ಡಿಸೇಲ್ ದರ ಏರಿಕೆ ಬೆನ್ನಲ್ಲೆ KSRTC ಬಸ್ ಟಿಕೆಟ್ ದರ ಹೆಚ್ಚಳದ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಶೀಘ್ರದಲ್ಲೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಗಳ ಟಿಕೆಟ್ ದರ ಹೆಚ್ಚಾವ ಸಾಧ್ಯತೆ ಇದೆ.
ಇನ್ನು ಈ ಕುರಿತು ಈಗಾಗಲೇ ಕಾಂಗ್ರೆಸ್ ಶಾಸಕ ರಾಜು ಕಾಗೆ ಸುಳಿವು ನೀಡಿದರು. ಈ ಬೆನ್ನಲ್ಲೆ KSRTC ನಿಮಮದ ಅಧ್ಯಕ್ಷ ಎಸ್ ಆರ್ ಶ್ರೀನಿವಾಸ್ ಕೂಡ ಶೇ.೧೫ ರಿಂದ ೨೦ ರಷ್ಟು ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಮೊನ್ನೆ ಬೋರ್ಡ್ ಮೀಟಂಗ್ ಮಾಡಿ ಟಿಕೆಟ್ ದರ ಹೆಚ್ಚಳ ಮಾಡುವ ವಿಚಾರದ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಈ ಹಿಂದೆ ೨೦೧೯ರಲ್ಲಿ KSRTC ಬಸ್ ಟಿಕೆಟ್ ದರ ಹೆಚ್ಚಳ ಆಗಿತ್ತು. ಇಲ್ಲಿ ತನಕ ಟಿಕೆಟ್ ದರ ಹೆಚ್ಚಳ ಮಾಡದೆ ೫ ವರ್ಷ ಆಗಿದೆ. ತೈಲ ಬೆಲೆ ಏರಿಕೆ ಆಗಿರುವುದರಿಂದ ದರ ಏರಿಕೆ ಅನಿವಾರ್ಯ. ನೌಕರರಿಗೆ ಸಂಬಳ ಹೆಚ್ಚಳ ಮತ್ತು ಸವಲತ್ತು ಕೊಡುವುದನ್ನ ಮಾಡಬೇಕಾದರೆ ದರ ಹೆಚ್ಚಳ ಆಗಲೇ ಬೇಕು. ನೌಕರರ ವೇತನ ಪರಿಷ್ಕರಣೆ ೨೦೨೦ ರಲ್ಲಿ ಮಾಡಬೇಕಿತ್ತು. ಇಲ್ಲಿ ತನಕ ಮಾಡಿಲ್ಲ. ಈ ಬಾರಿ ೨೦೨೪ ರಲ್ಲಿ ವೇತನ ಪರಿಷ್ಕರಣೆ ಮಾಡುತ್ತೇವೆ. ಹಾಗಾಗಿ ಟಿಕೆಟ್ ದರ ಹೆಚ್ಚಳ ಆಗುತ್ತೆ. ಕಳೆದ ತ್ರೈಮಾಸಿಕದಲ್ಲಿ KSRTC ಗೆ ೨೯೫ ಕೋಟಿ ನಷ್ಟ ಆಗಿದೆ. ೪೦ ವೋಲ್ವೋ ಬಸ್ ಗಳಿಗೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈಗಾಗಲೇ ೬೦೦ ಸಾಮಾನ್ಯ ಬಸ್ ಗಳನ್ನು ಕೊಂಡುಕೊಳ್ಳಲಾಗಿದೆ. ೧೫ ರಿಂದ ೨೦% ದರ ಹೆಚ್ಚಳ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.





