Mysore
13
scattered clouds

Social Media

ಸೋಮವಾರ, 22 ಡಿಸೆಂಬರ್ 2025
Light
Dark

ಜೆಡಿಎಸ್‌ ಶಾಸಕರನ್ನು ಕೊಂಡುಕೊಳ್ಳುವ ಕೆಲಸ ಮಾಡಲ್ಲ: ಗೃಹ ಸಚಿವ ಪರಮೇಶ್ವರ್‌

ಬೆಂಗಳೂರು: ನಾವು ಜೆಡಿಎಸ್‌ ಶಾಸಕರನ್ನು ಕೊಂಡುಕೊಳ್ಳುವ ಕೆಲಸಕ್ಕೆ ಕೈಹಾಕಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ಹೇಳಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಂಗಡಿಗೆ ಹೋಗಿ ಯಾವುದೇ ಪದಾರ್ಥದ ಬೆಲೆ ಎಷ್ಟು ಅಂತ ಕೇಳಿದಾಗ ಅವರು ಬೆಲೆ ಹೇಳುತ್ತಾರೆ. ಆದರೆ ಈ ರೀತಿ ನಾವೇನೂ ಜೆಡಿಎಸ್‌ನವರ ಬಳಿ ಹೋಗಿ ಕೇಳಲಿಲ್ಲ ಎಂದರು.

ಇನ್ನು ಸಿ.ಪಿ.ಯೋಗೇಶ್ವರ್‌ ಹೇಳಿಕೆಯಿಂದ ಜೆಡಿಎಸ್‌ ನಾಯಕರು ಒಗ್ಗಟ್ಟು ಪ್ರದರ್ಶನ ಮಾಡುತ್ತಿದ್ದಾರೆ. ಸಿಪಿವೈ ಹೇಳಿಕೆಯಿಂದ ಜೆಡಿಎಸ್‌ನವರು ಹೆದರುವ ಅವಶ್ಯಕತೆಯಿಲ್ಲ. ನಾವು ಅವರನ್ನು ಕೊಂಡುಕೊಳ್ಳಲು ಹೋಗಲ್ಲ. ಯೋಗೇಶ್ವರ್‌ ಹಾಗೆ ಸುಮ್ಮನೆ ಹೇಳಿಕೆ ನೀಡಿದ್ದಾರೆ ಅಷ್ಟೇ. ಆ ಹೇಳಿಕೆಯನ್ನೇ ಜೆಡಿಎಸ್‌ನವರು ಅಷ್ಟೊಂದು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು ಲೇವಡಿ ಮಾಡಿದರು.

ಇನ್ನು ಸಂಪುಟ ಪುನರ್‌ರಚನೆ ಸಂಬಂಧ ಮಾತನಾಡಿದ ಅವರು, ಸಂಪುಟ ಪುನರ್‌ ರಚನೆ ಬಗ್ಗೆ ನನಗೆ ಗೊತ್ತಿಲ್ಲ. ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ದೆಹಲಿಗೆ ಹೋಗಿದ್ದಾರೆ. ಖಾತೆ ಬದಲಾವಣೆ ಬಗ್ಗೆ ಏನು ತೀರ್ಮಾನ ಮಾಡುತ್ತಾರೋ ಆ ಬಗ್ಗೆ ನನಗೆ ಗೊತ್ತಿಲ್ಲ. ನನಗೆ ಏನು ಜವಾಬ್ದಾರಿ ಕೊಟ್ಟಿದ್ದಾರೋ ಅದನ್ನು ಮಾಡಿಕೊಂಡು ಬಂದಿದ್ದೇನೆ ಎಂದರು.

 

Tags:
error: Content is protected !!