Mysore
27
clear sky

Social Media

ಗುರುವಾರ, 12 ಫೆಬ್ರವರಿ 2026
Light
Dark

ನಮ್ಮಲ್ಲಿ ಸಿಎಂ ಆಗೊ ಅರ್ಹತೆ ಇರುವವರು 50 ಜನ‌ರಿದ್ದಾರೆ : ಸಚಿವ ಚಲುವರಾಯಸ್ವಾಮಿ

ಮಂಡ್ಯ : ಜನರ ಸಮಸ್ಯೆಗೆ ಸ್ಪಂದಿಸುವುದು ನಮಗೆ ಮುಖ್ಯ. ಚುನಾವಣೆಗಾಗಿ ಬಿಜೆಪಿ ಇಲ್ಲ ಸಲ್ಲದ ವಿಚಾರ ಸೃಷ್ಟಿಸುತ್ತಿದೆ ಎಂದು ಸಚಿವ ಚಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ನಲ್ಲಿ ಡಿನ್ನರ್ ಪಾಲಿಟಿಕ್ಸ್ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ. ರಾಜಕೀಯ ಚರ್ಚೆ ಮಾಡಲ್ಲ, ಅಭಿವೃದ್ಧಿ ಬಗ್ಗೆ ಮಾತನಾಡ್ತೀನಿ. ಹೈಕಮಾಂಡ್ ಇದೆ, ಶಾಸಕಾಂಗ ಸಭೆ ಇದೆ ಅಲ್ಲಿ ತೀರ್ಮಾನ ಮಾಡ್ತಾರೆ ವಿರೋಧ ಪಕ್ಷದ ಜೊತೆ ಸೇರಿ ಮಾಧ್ಯಮದವರು ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡ್ತಿದ್ದಾರೆ ಎಂದು ಹೇಳಿದರು.

ಸಿದ್ದು 5 ವರ್ಷ ಸಿಎಂ ಆಗಿರ್ತಾರೆ ಎಂಬ ಮಹದೇವಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ನಮ್ಮಲ್ಲಿ ಮುಖ್ಯಮಂತ್ರಿ ಆಗಲು ಅರ್ಹತೆ ಇರುವವರು 50 ಜನ‌ ಇದ್ದಾರೆ. ಸಮಯ ಬಂದಾಗ ಹೈಕಮಾಂಡ್ ತೀರ್ಮಾನ ಮಾಡಲಿದೆ, ಈಗ ಸಿಎಂ ಸೀಟ್ ಖಾಲಿ ಇಲ್ಲ. ಮಹದೇವಪ್ಪ ಅವರ ಹೇಳಿಕೆ ಬಗ್ಗೆ ಅವರನ್ನೇ ಕೇಳಬೇಕು. ಸಿದ್ದರಾಮಯ್ಯ, ಡಿಕೆಶಿ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಅವರು ಗಂಭೀರವಾಗಿ ಕೆಲಸ ಮಾಡ್ತಿದ್ದಾರೆ‌. ನಾವುಗಳು ಮಾತನಾಡಿ ಪ್ರಯೋಜನ ಇಲ್ಲ ಎಂದರು.

ಆಣೆ ಪ್ರಮಾಣಕ್ಕೆ ಮಾಜಿ ಸಿಎಂ ಎಚ್‌ ಡಿಕೆ ಆಹ್ವಾನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅವರಿಗೆ ಮಾಡಲು ಕೆಲಸವಿಲ್ಲ. ವರ್ಗಾವಣೆಯಲ್ಲಿ ನೇರವಾಗಿ, ಪರೋಕ್ಷವಾಗಿ ನಾವಿಲ್ಲ ಎಂದು ಧರ್ಮಸ್ಥಳದಲ್ಲಿ ಆಣೆ ಮಾಡಲಿ. ಹಳೆಯದಲ್ಲೇ ಬೇಡ ಇವತ್ತಿನದು ಬೇಕು ಅಂತಾರೆ? ಆಯ್ತು ಹಳೆಯದು ಬೇಡ 2018ರ 14 ತಿಂಗಳು ಆಡಳಿತ ಬಗ್ಗೆಯೇ ಆಣೆ ಮಾಡಲಿ. ದೇವೇಗೌಡರ ಬಗ್ಗೆ ನಾನು ಮಾತನಾಡಲ್ಲ. ಕುಮಾರಸ್ವಾಮಿ ಆಣೆ ಪ್ರಮಾಣದ ವಿಚಾರ ಎತ್ತಿದ್ದಾರೆ. ಅವರು ಎಲ್ಲಿಗೆ ಬಂದು ಪ್ರಮಾಣ ಮಾಡ್ತಾರೆ ಅವರೇ ಹೇಳಲಿ ಎಂದರು.

ಆಪರೇಷನ್ ಕಮಲ, ಹಸ್ತ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಆಪರೇಷನ್ ಹಸ್ತದ ಅವಶ್ಯಕತೆ ನಮಗಿಲ್ಲ‌‌. ಬಿಜೆಪಿ-ಜೆಡಿಎಸ್ ಮೈತ್ರಿ ಎರಡು ಪಕ್ಷದ ಶಾಸಕರಿಗೆ ಸಮಾಧಾನ ಇಲ್ಲ. ಹಾಗಾಗಿ ಆಪರೇಷನ್ ಕಮಲದ ವಿಚಾರ ತೆಗೆದು ಗೊಂದಲ ಸೃಷ್ಟಿಸುತ್ತಿದ್ದಾರೆ‌‌ ಎಂದು ಆರೋಪಿಸಿದರು.

ಕಾಂಗ್ರೆಸ್ ಶಾಸಕರಿಗೆ 50ಕೋಟಿ ಆಫರ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಾರಿಗೆ ಆಫರ್ ಬಂದಿದ್ಯೋ ಗೊತ್ತಿಲ್ಲ. ಆ ವಿಚಾರ ಹೇಳಿದ ರವಿ ಪಕ್ಕದಲ್ಲೇ ಇದ್ದಾನೆ. ಅವನಿಗೆ ಏನಾದರೂ ದುಡ್ಡು ಬಂದಿದ್ದರೆ ನಮಗೂ ಕೊಡಲಿ ಎಂದು ನಗೆ ಚಟಾಕಿ ಹಾರಿಸಿದರು.

ಚಲುವರಾಯಸ್ವಾಮಿ ವಿರುದ್ಧ ಇಡಿ ದಾಳಿಗೆ ಷಡ್ಯಂತ್ರ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, 2 ತಿಂಗಳ ಹಿಂದಯೇ ಇಡಿಗೆ ನನ್ನ ವಿರುದ್ಧ ಮೂಗರ್ಜಿಗಳು ಹೋಗಿರುವ ಮಾಹಿತಿ ಇದೆ. ಮೈತ್ರಿ ಆದವರ ಹೊಂದಾಣಿಕೆ ಚೆನ್ನಾಗಿರಲೇಬೇಕು ಅವರು ಏನು ಬೇಕಾದರೂ ಮಾಡಲಿ ಎಂದು ತಿಳಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!