Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ವಯನಾಡು ಭೂಕುಸಿತ ದುರಂತದಲ್ಲಿ ಮಗನನ್ನು ಕಳೆದುಕೊಂಡ ಕೊಡಗಿನ ದಂಪತಿ

ಕೊಡಗು: ವಯನಾಡು ಭೂಕುಸಿತ ದುರಂತದಲ್ಲಿ ಕೊಡಗಿನ ದಂಪತಿಯೋರ್ವರು ಮಗನನ್ನು ಕಳೆದುಕೊಂಡು ತೀವ್ರ ದುಃಖದಲ್ಲಿದ್ದಾರೆ.

ಕೊಡಗಿನಲ್ಲಿ ನಿರಂತರ ಮಳೆಯಾಗುತ್ತಿದ್ದ ಪರಿಣಾಮ ಕಳೆದ ಮೂರು ವಾರಗಳ ಹಿಂದೆ ಕೂಲಿ ಹರಸಿ ದಂಪತಿ ಕೇರಳದ ವಯನಾಡಿಗೆ ಹೋಗಿದ್ದರು. ಜೊತೆಗೆ ಮಗನನ್ನೂ ಸಹ ವಯನಾಡಿಗೆ ಕರೆದುಕೊಂಡು ಹೋಗಿದ್ದರು. ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಕವಿತಾ ಹಾಗೂ ರವಿ ದಂಪತಿಯ ಪುತ್ರ ರೋಹಿತ್‌ ಸಾವನ್ನಪ್ಪಿದ್ದು, ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಮೃತ ರೋಹಿತ್‌ ತಂದೆ ರವಿ ಅವರು, ಘಟನೆ ನಡೆದ ಬಳಿಕ ಪೊಲೀಸ್‌ ಅಧಿಕಾರಿಯೋರ್ವರು ನನ್ನ ಮಗನ ಮೃತದೇಹವನ್ನು ನನಗೆ ತೋರಿಸಿದರು. ಅದನ್ನು ನಾನು ಮುಟ್ಟಿದೆ. ಅದು ತುಂಬಾ ಮೃದುವಾಗಿತ್ತು. ಆದ್ದರಿಂದ ಮೃತದೇಹವನ್ನು ಕೊಡಗಿಗೆ ತರಲು ಸಾಧ್ಯವಾಗದೇ ವಯನಾಡಿನಲ್ಲಿ ಅಂತ್ಯಕ್ರಿಯೆ ನಡೆಸಿದ್ದೇವೆ ಎಂದು ಕಣ್ಣೀರು ಹಾಕಿದ್ದಾರೆ.

ಒಟ್ಟಿನಲ್ಲಿ ವಯನಾಡು ದುರಂತದಿಂದ ಹಲವರು ಈಗ ಸಂಕಷ್ಟದಲ್ಲಿದ್ದು, ಮುಂದೆ ದಿಕ್ಕು ತೋಚದ ರೀತಿಯಲ್ಲಿ ಕಷ್ಟ ಅನುಭವಿಸುತ್ತಿದ್ದಾರೆ. ಇದಕ್ಕೆ ಸರ್ಕಾರ ಹೇಗೆ ಪರಿಹಾರ ನೀಡುತ್ತೆ ಎಂಬುದನ್ನು ಕಾದು ನೋಡಬೇಕಿದೆ.

 

Tags: