ವಯನಾಡು: ವಯನಾಡು ಭೂಕುಸಿತ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲಿಯಾರ್ ನದಿ ದಡದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ವಯನಾಡು ಭೂಕುಸಿತ ದುರಂತ ಪ್ರಕರಣ ನಡೆದು ಒಂದು ವಾರವೇ ಕಳೆದಿದೆ. ಹೀಗಿರುವಾಗಲೇ ಈಗ ಚಾಲಿಯಾರ್‌ನದಿ ದಂಡೆಯ ಪಕ್ಕದಲ್ಲಿ ಶೋಧ ಕಾರ್ಯ ಆರಂಭಿಸಲಾಗಿದೆ. ಹೆಲಿಕಾಪ್ಟರ್‌ನಲ್ಲಿ ವಿಶೇಷ ತಂಡವು ಜಲಮೂಲಗಳು ಅಥವಾ ಅವಶೇಷಗಳನ್ನು ಸ್ಕ್ಯಾನ್‌ಮಾಡುತ್ತಿವೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಶಾಲೆಯ ಸಮೀಪವಿರುವ ನದಿ, ಗ್ರಾಮ ಮತ್ತು ನದಿಯ ಕೆಳಭಾಗದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮೇಘಶ್ರೀ ಮಾಹಿತಿ ನೀಡಿದ್ದಾರೆ.
ಇನ್ನು ಚಾಲಿಯಾರ್‌ನದಿ ಉದ್ದಕ್ಕೂ ದುರ್ಗಮ ಪ್ರದೇಶಗಳಿದ್ದು, ಕಳೆದೆರಡು ದಿನಗಳಿಂದ ಕೆಲವು ಸ್ಥಳೀಯ ಸ್ವಯಂಸೇವಕರು ಅಲ್ಲಿ ಸಿಕ್ಕಿಬಿದ್ದಿದ್ದಾರೆ ಎಂಬ ಮಾಹಿತಿ ಹೊರಬಂದಿದ್ದು, ಈಗ ಅವರನ್ನು ಕೂಡ ರಕ್ಷಿಸುವ ಕೆಲಸ ಮಾಡಲಾಗುತ್ತಿದೆ.
ರಕ್ಷಣಾ ಕಾರ್ಯಾಚರಣೆ ಇನ್ನೂ ಕೆಲ ದಿನಗಳು ಮುಂದುವರಿಯಲಿದ್ದು, ಶವಗಳನ್ನು ಹೊರತೆಗೆಯಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.





