Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ವಯನಾಡು ಭೂಕುಸಿತ ದುರಂತ: ಮೃತದೇಹಗಳನ್ನು ನೋಡಿ ನೋಡಿ ಕಂಗಾಲಾದ ಜೆಸಿಬಿ ಚಾಲಕರು

ವಯನಾಡು: ಕೇರಳದ ವಯನಾಡು ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಭೂಕುಸಿತದಿಂದ ಹಲವರು ಸಾವನ್ನಪ್ಪಿದ್ದು, ಕಾರ್ಯಾಚರಣೆ ಮುಂದುವರಿದಿದೆ.

ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಜೆಸಿಬಿ ಚಾಲಕರು ಹೆಣಗಳನ್ನು ನೋಡಿ ನೋಡಿ ಕಂಗಾಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಚಾಲಕರಿಗೆ ಮಾನಸಿಕ ಆರೋಗ್ಯ ತಪಾಸಣೆ ನಡೆಸಲು ಆರೋಗ್ಯ ಇಲಾಖೆ ನಿರ್ಧಾರ ಮಾಡಿದೆ.

ದುರಂತ ನಡೆದ ಸ್ಥಳದಲ್ಲೇ ಬೀಡುಬಿಟ್ಟಿರುವ ಜೆಸಿಬಿ ವಾಹನ ಚಾಲಕರು ಇದುವರೆಗೂ 250ಕ್ಕೂ ಹೆಚ್ಚು ಶವಗಳನ್ನು ಹೊರೆತೆಗೆದಿದ್ದು, ಶವಗಳನ್ನು ನೋಡಿ ನೋಡಿ ಕಂಗಾಲಾಗಿದ್ದಾರೆ.

ಅವಶೇಷಗಳಡಿ ಸಿಲುಕಿರುವ ಮೃತದೇಹಗಳನ್ನು ತೆಗೆಯುವುದು ಚಾಲಕರಿಗೆ ಸವಾಲಾಗಿದ್ದು, ಅವರ ಮನಸ್ಥಿತಿ ಮೇಲೆ ಭಾರೀ ಪರಿಣಾಮ ಬೀರಿದೆ.

ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದ್ದು, ಚಾಲಕರಿಗೆ ಆರೋಗ್ಯ ತಪಾಸಣೆ ನಡೆಸಲು ನಿರ್ಧಾರ ಮಾಡಲಾಗಿದೆ.

ಇನ್ನು ಭೂಕುಸಿತ ಅವಘಡದ ಬಳಿಕ ನಾಪತ್ತೆಯಾಗಿರುವ ನಿವಾಸಿಗಳ ಪಟ್ಟಿಯನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಾಗುವುದು ಎಂದು ಕೇರಳ ಸರ್ಕಾರ ಮಾಹಿತಿ ನೀಡಿದೆ.

ಅವಶೇಷಗಳಡಿ ಇನ್ನೂ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಘಟನಾ ಸ್ಥಳದ 60 ಕಿ.ಮೀ ಸುತ್ತಲೂ ಕೂಡ ಕಾರ್ಯಾಚರಣೆ ಮುಂದುವರಿದಿದೆ.

 

 

Tags: