ವಯನಾಡು: ಕೇರಳದ ವಯನಾಡಿನಲ್ಲಿ ಸಂಭವಿಸಿದ ಗುಡ್ಡ ಕುಸಿತ ಪ್ರಕರಣದಲ್ಲಿ ಚಾಮರಾಜನಗರ ಇಬ್ಬರು ಮೃತಪಟ್ಟಿದ್ದು, ಮತ್ತಿಬ್ಬರಿಗೆ ಶೋಧ ಕಾರ್ಯ ನಡೆಸಲಾಗುತ್ತಿದೆ.
ಮೆಪ್ಪಾಡಿಯಲ್ಲಿ ವಾಸವಿದ್ದ ಚಾಮರಾಜನಗರದ ಪುಟ್ಟಸಿದ್ದಿ ಹಾಗೂ ರಾಣು ಎಂಬುವವರ ಮೃತಪಟ್ಟಿದ್ದಾರೆ. ಚಾಮರಾಜನಗರ ತಾಲ್ಲೂಕಿನ ಇರಸವಾಡಿ ಮೂಲದ ರಾಜನ್ ಹಾಗೂ ರಜಿನಿ ನಾಪತ್ತೆಯಾಗಿದ್ದಾರೆ.
ಕಳೆದ 30 ವರ್ಷಗಳಿಂದ ಕೇರಳದ ಚೂರಲ್ಲಾದಲ್ಲಿ ರಾಜನ್ ಹಾಗೂ ರಜಿನಿ ವಾಸವಿದ್ದರು. ಆದರೆ ಇಂದು ಸಂಭವಿಸಿದ ಭೂಕುಸಿತದ ನಂತರ ಅವರಿಬ್ಬರು ಕಾಣೆಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ.
ಇದಲ್ಲದೇ ಚಾಮರಾಜನಗರದ ಇನ್ನೊಂದು ಕುಟುಂಬ ಎತ್ತರದ ಗುಡ್ಡ ಏರಿ ಪ್ರಾಣಾಪಾಯದಿಂದ ಪಾರಾಗಿದೆ. ಇವರೆಲ್ಲಾ ಪ್ರಾಣಾಪಾಯದಿಂದ ಪಾರಾಗಲು ಸಾಕಿದ ಹಸುವೇ ಕಾರಣ ಎನ್ನಲಾಗುತ್ತಿದೆ.





