ಮೈಸೂರು : ರಾಜ್ಯದಲ್ಲಿ ಈ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದೆ. ಇದರಿಂದಾಗಿ ರಾಜ್ಯದಲ್ಲಿ ನೀರಿನ ಅಭಾವ ಸೃಷ್ಟಿಯಾಗಿದೆ.
ಈ ನಡುವೆ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಹಿಂಗಾರು ಚುರುಕುಗೊಂಡಿದ್ದು ಅಲ್ಲಲ್ಲಿ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಜಲಾಶಯಗಳಲ್ಲಿ ಪ್ರತಿ ದಿನವೂ ಕೂಡ ನೀರಿನ ಮಟ್ಟ ಏರಿಳಿತವಾಗುತ್ತಿರುತ್ತದೆ. ಅಂತೆಯೇ ಇಂದೂ ಕೂಡ ರಾಜ್ಯದ ಪ್ರಮುಖ ಜಲಾಶಯ ಎಂದೆಂಸಿರುವ ಕೆ ಆರ್ ಎಸ್ ( ಕೃಷ್ಣ ರಾಜ ಸಾಗರ ) ಹಾಗೂ ಕಬಿನಿ ಜಲಾಶಯದಲ್ಲಿನ ನೀರಿನ ಮಟ್ಟ ಕುಸಿತವಾಗಿದೆ .ಇಂದು ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರಿನ ಮಟ್ಟ ಇಂತಿದೆ.
ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ
ಕೆ ಆರ್ ಎಸ್
ಗರಿಷ್ಠ ನೀರಿನ ಮಟ್ಟ – 124.80 ಅಡಿ
ಇಂದಿನ ನೀರಿನ ಮಟ್ಟ – 99.68 ಅಡಿ
ಒಳ ಹರಿವಿನ ಪ್ರಮಾಣ – 1,397ಕ್ಯೂ
ಹೊರ ಹರಿವಿನ ಪ್ರಮಾಣ – 1,500 ಕ್ಯೂ
ಕಬಿನಿ
ಗರಿಷ್ಠ ನೀರಿನ ಮಟ್ಟ – 2,284 ಅಡಿ
ಇಂದಿನ ನೀರಿನ ಮಟ್ಟ – 2,274.31 ಅಡಿ
ಒಳ ಹರಿವಿನ ಪ್ರಮಾಣ – 211 ಕ್ಯೂ
ಹೊರ ಹರಿವಿನ ಪ್ರಮಾಣ – 1500 ಕ್ಯೂ
ಹಾರಂಗಿ
ಗರಿಷ್ಠ ನೀರಿನ ಮಟ್ಟ – 2859.00 ಅಡಿ
ಇಂದಿನ ನೀರಿನ ಮಟ್ಟ – 2844.82 ಅಡಿ
ಒಳ ಹರಿವಿನ ಪ್ರಮಾಣ – 211 ಕ್ಯೂ
ಹೊರ ಹರಿವಿನ ಪ್ರಮಾಣ – 1,500 ಕ್ಯೂ
ಹೇಮಾವತಿ
ಗರಿಷ್ಠ ನೀರಿನ ಮಟ್ಟ – 2922.00 ಅಡಿ
ಇಂದಿನ ನೀರಿನ ಮಟ್ಟ – 2893.40 ಅಡಿ
ಒಳ ಹರಿವಿನ ಪ್ರಮಾಣ – 404 ಕ್ಯೂ
ಹೊರ ಹರಿವಿನ ಪ್ರಮಾಣ – 1,200 ಕ್ಯೂ
ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೆನ್ನೆಗೆ ಹೋಲಿಕೆ ಮಾಡಿದರೆ ಇಂದಿನ ನೀರಿನ ಮಟ್ಟ ಕಡಿಮೆಯಾಗಿದೆ.