Mysore
17
few clouds

Social Media

ಸೋಮವಾರ, 29 ಡಿಸೆಂಬರ್ 2025
Light
Dark

ಸಿಎಂ ಬೆಂಗಾವಲು ವಾಹನ ಎದುರು ಚಾಲನೆ: ಶಾಸಕ ಜನಾರ್ಧನ ರೆಡ್ಡಿಯ 3 ಕಾರು ಪೊಲೀಸ್‌ ವಶಕ್ಕೆ

ಕೊಪ್ಪಳ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಗಾವಲು ಪಡೆಗೆ ಎದುರು ಹೋಗಿ ಟ್ರಾಫಿಕ್‌ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇರೆಗೆ  ಪೊಲೀಸರು ಶಾಸಕ ಜನಾರ್ಧನ ರೆಡ್ಡಿಯ ಕಾರನ್ನ ವಶಕ್ಕೆ ಪಡೆದಿದ್ದಾರೆ.

ಸಿಎಂ ಕಾನ್‌ ವೇ ನಿಯಮ ಉಲ್ಲಂಘಿಸಿದ ಸಂಬಂಧ ಪ್ರಕರಣ ದಾಖಲಾಗಿದ್ದು, ಕೇಸ್‌ ಅನ್ವಯ ಗಂಗಾವತಿ ಪೊಲೀಸರು ಜನಾರ್ಧನ ರೆಡ್ಡಿಯ ಮೂರು ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.

ಅ.5 ರಂದು ಸಿಎಂ ಸಿದ್ದರಾಮಯ್ಯ  ಗಂಗಾವತಿ ಮಾರ್ಗವಾಗಿ ಪ್ರಯಾಣಿಸುವ ಸಂದರ್ಭದಲ್ಲಿ ಕಾನ್‌ ವೇ ಎದುರು  ಶಾಸಕ ಜನಾರ್ಧನ ರೆಡ್ಡಿ ಕಾರು ಚಾಲಾಯಿಸಿತ್ತು. ಈ  ಹಿನ್ನೆಲೆಯಲ್ಲಿ ಭದ್ರತಾ ಲೋಪಕ್ಕೆ ಅಡ್ಡಿಯಾಗಿರುವ ಕಾರಣ ಪೊಲೀಸರು ಚಾಲಕನ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದರು.

 

ಬಳಿಕ ಶಾಸಕ ಜನಾರ್ಧನ ರೆಡ್ಡಿಗೆ ಸೇರಿರುವ ರೇಂಜ್‌ ರೋವರ್‌, ಸ್ಕಾರ್ಪಿಯೋ ಮತ್ತು ಫಾರ್ಚುನರ್‌ ಕಾರನ್ನು ಗಂಗಾವತಿ ಸಂಚಾರಿ ಪೊಲೀಸರು ಸೀಜ್‌ ಮಾಡಿದ್ದು, ಮಂಗಳವಾರ ಬೆಂಗಳೂರಿನಲ್ಲಿ ಜಪ್ತಿ ಮಾಡಿದ್ದ ಕಾರನ್ನು ಗಂಗಾವತಿಗೆ ಸ್ಥಳಾಂತರ ಮಾಡಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಅಕ್ಟೋಬರ್‌.8) ಶಾಸಕ ಜನಾರ್ಧನ ರೆಡ್ಡಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ರಾಜಕೀಯವಾಗಿ ನನಗೆ ಏನೇ ತೊಂದರೆ ಕೊಟ್ಟರೂ, ಏನೇ ಇದ್ದರೂ, ಸಿದ್ದರಾಮಯ್ಯ ಅಲ್ಲ ಮುಖ್ಯಮಂತ್ರಿ ಎಂಬ ಕಾರಣಕ್ಕೆ ಗೌರವ ಕೊಟ್ಟು ಸುಮ್ಮನಿದ್ದೇನೆ ಎಂದಿದ್ದಾರೆ.

ಅಸಲಿಗೆ ಆಗಿದ್ದು ಇದೆ..
ಸಿಎಂ ಸಂಚಾರ ಹಿನ್ನೆಲೆಯಲ್ಲಿ ಗಂಗಾವತಿಯಲ್ಲಿ 30ಕ್ಕೂ ಅಧಿಕ ನಿಮಿಷಗಳ ಕಾಲ ಸಂಚಾರ ಸ್ಥಗಿತಗೊಳಿಸಿದ್ದರು. ಅಂದಿನ ದಿನ ನಾನು ಗಂಗಾವತಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಹೋಗಿದ್ದೆ. ಆದರೆ, ಅಂದೇ ನಮ್ಮ ಮನೆಯಲ್ಲಿ ಹೋಮವನ್ನು ಆಯೋಜಿಸಲಾಗಿತ್ತು. ನಮ್ಮ ಮನೆಯವರು ಪೂರ್ಣಾಹುತಿಗೆ ಬರಬೇಕು ಎಂದಿದ್ದರು. ಹೀಗಾಗಿ ಗಂಗಾವತಿಯಿಂದ ಮನೆಗೆ ಹೊರಟಿದ್ದೆ. ಆ ವೇಳೆ ಅರ್ಧ ಗಂಟೆ ಕಾಲ ಕಾದರೂ ಕಾನ್‌ ವೇ ಬರಲಿಲ್ಲ. ಆ ಕಾರಣಕ್ಕಾಗಿ ನಾನು ಪೊಲೀಸರಿಗೆ ಹೇಳಿ ಹೋಗಬಹುದಿತ್ತು. ಆದರೆ, ನನ್ನ ಮುಂದೆ ಇರುವ ವಾಹನವನ್ನು ಬಿಟ್ಟರೆ ಪೊಲೀಸರ ಕರ್ತವ್ಯಕ್ಕೆ ಲೋಪಕ್ಕೆ ಸಮಸ್ಯೆಯಾಗುತ್ತದೆ ಎಂದು ಭಾವಿಸಿ, ಡಿವೈಡರ್‌ ಮೇಲೆ ಕಾರು ಚಲಾಯಿಸಲು ಚಾಲಕನಿಗೆ ತಿಳಿಸಿದೆ ಅಷ್ಟೇ. ಬೇಕಿದ್ದರೆ ನನ್ನ ಕಾರಿನಲ್ಲಿ ಸಿಸಿ ಕ್ಯಾಮೆರಾ ದೃಶ್ಯ ಇದೆ ನೋಡಬಹುದು. ನಾನು ನಿಯಮ ಉಲ್ಲಂಘನೆ ಮಾಡುವಷ್ಟು ಮೂರ್ಖನಲ್ಲ ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ನಾನು ಡಿವೈಡರ್‌ ಮೇಲೆ ಚಾಲಕನಿಗೆ ತೆರಳಲು ತಿಳಿಸಿದ್ದೆ. ಹೀಗಾಗಿ ಆತನ ಮೇಲೆ ಎಫ್‌ಐಆರ್‌ ದಾಖಲಾಗಿದೆ. ಅದಕ್ಕೆ ನಾನು ಕಾನೂನಿನ ಮುಖಾಂತರವೇ ಎದುರಿಸುತ್ತೇನೆ ಎಂದರು.

Tags:
error: Content is protected !!