Mysore
19
broken clouds

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ವಿನಯ್‌ ಸೋಮಯ್ಯ ಆತ್ಮಹತ್ಯೆ ಪ್ರಕರಣ| ಸಿಬಿಐ ತನಿಖೆಗೆ ಆಗ್ರಹಿಸಿದ ಯತ್ನಾಳ್‌

ಬೆಂಗಳೂರು: ರಾಜ್ಯ ಸರ್ಕಾರ ಕೊಡಗಿನ ವಿನಯ್‌ ಸೋಮಯ್ಯ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಪ್ರಕರಣದಲ್ಲಿರುವ ಸಾಕ್ಷ್ಯಾಧಾರಗಳನ್ನ ನಾಶ ಮಾಡುವ ಮೊದಲು ಪ್ರಕರಣದ ತನಿಖೆಯನ್ನು ಕೂಡಲೇ ಸಿ.ಬಿ.ಐ ವರ್ಗಾಯಿಸಬೇಕು ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಆಗ್ರಹಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ದುಷ್ಟ ಶಕ್ತಿಗಳು ಈ ಪ್ರಕರಣದಲ್ಲಿರುವ ಸಾಕ್ಷ್ಯಾಧಾರಗಳನ್ನ ನಾಶ ಮಾಡುವ ಮೊದಲು ಪ್ರಕರಣದ ತನಿಖೆಯನ್ನು ಕೂಡಲೇ ಕೇಂದ್ರ ತನಿಖಾ ದಳ (ಸಿ.ಬಿ.ಐ) ವರ್ಗಾಯಿಸಬೇಕೆಂದು ಆಗ್ರಹಿಸುತ್ತೇನೆ ಎಂದಿದ್ದಾರೆ.

ಶಾಸಕರಾದ ಮಂಥರ್ ಗೌಡ ಹಾಗೂ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರು ಬಲಾಢ್ಯರು ಹಾಗೂ ಆಡಳಿತಾರೂಡಿ ಕಾಂಗ್ರೆಸ್ ಸರ್ಕಾರದಲ್ಲಿರುವುದರಿಂದ ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಎಫ್.ಐ.ಆರ್ ನಲ್ಲಿ ಶಾಸಕದ್ವಯರ ಹೆಸರನ್ನು ಉಲ್ಲೇಖ ಮಾಡದೆ ಪೊಲೀಸರು ಪರೋಕ್ಷವಾಗಿ ತನಿಖೆ ಆರಂಭ ಆಗುವ ಮುನ್ನವೇ prime suspect ಗಳಿಗೆ ದೋಷ ಮುಕ್ತಗೊಳಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ದಿವಂಗತ ಕಾರ್ಯಕರ್ತ ವಿನಯ್ ಅವರ ಕುಟುಂಬಷ್ಟರು ನೀಡಿರುವ ದೂರರ್ಜಿಯ ವಿಷಯದಲ್ಲೇ ಶಾಸಕರ ಪಾತ್ರ ಉಲ್ಲೇಖಿತವಾಗಿದೆ. ಬಡವರಿಗೆ ಒಂದು ನ್ಯಾಯ, ಅಧಿಕಾರಸ್ಥರಿಗೆ ಒಂದು ನ್ಯಾಯ ಆಗಬಾರದು. ಕಾರ್ಯಕರ್ತರು ಪಕ್ಷದ ಸೇನಾನಿಗಳು ಅವರನ್ನು ರಕ್ಷಿಸಬೇಕಾದದ್ದು ಪಕ್ಷದ ಕರ್ತವ್ಯ ಎಂದಿದ್ದಾರೆ.

ಸಮಯವನ್ನು ವ್ಯರ್ಥ ಮಾಡದೆ ಕೂಡಲೇ ಪ್ರಕರಣವನ್ನು ಸಿ.ಬಿ.ಐಗೆ ನೀಡಿದರೆ ಪ್ರಕರಣ ತಾರ್ಕಿಕ ಅಂತ್ಯ ಕಾಣಬಹುದು ಇಲ್ಲದಿದ್ದರೆ ತನಿಖೆಯಲ್ಲಿ ಕೆಲ ‘ಪ್ರಭಾವಿ’ ಗಳು ಹಸ್ತಕ್ಷೇಪ ಮಾಡುವ ಮೂಲಕ, ಸಾಕ್ಷ್ಯಾಧಾರಗಳನ್ನು ನಾಶ ಮಾಡುವ ಮೂಲಕ ಮುಚ್ಚಿಹಾಕುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದ್ದಾರೆ.

Tags:
error: Content is protected !!