ರಾಯಚೂರು: ಗ್ರಾಮದ ಮೂವರ ಮೇಲೆ ದಾಳಿ ಮಾಡಿದ್ದ ಚಿರತೆಯನ್ನು ಗ್ರಾಮಸ್ಥರು ಹಿಡಿದು ಕೊಂದ ಘಟನೆ ಡಿ.ಕರಡಿಗುಡ್ಡ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಚಿರತೆಯು ಗ್ರಾಮದ ಮೂವರ ಮೇಲೆ ದಾಳಿ ಮಾಡಿತ್ತು. ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿತ್ತು. ಆದಾಗ್ಯೂ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಅರಣ್ಯಾಧಿಕಾರಿಗಳ ಕಾರ್ಯಚರಣೆ ವೇಳೆ ಚಿರತೆ ಸೆರೆ ಸಿಗಲಿಲ್ಲ. ಈ ಹಿನ್ನಲೆ ಗ್ರಾಮಸ್ಥರೇ ಅಖಾಡಕ್ಕೆ ಇಳಿದು ಚಿರತೆಯನ್ನು ಹುಡುಕಿ, ದಾಳಿ ಮಾಡಿ ಅರಣ್ಯ ಅಧಿಕಾರಿಗಳ ಎದುರೇ ಚಿರತೆಯನ್ನು ಭರ್ಜಿಯಿಂದ ಚುಚ್ಚಿ, ದೊಣ್ಣೆಗಳಿಂದ ಹೊಡೆದು ಕೊಂದು ಹಾಕಿದ್ದರು.
ಇತ್ತ ಸ್ಥಳದಲ್ಲಿ ಸೇರಿದ್ದ ಸಾವಿರಾರು ಜನರನ್ನು ನಿಯಂತ್ರಿಸಲು ಆಗದೆ ಪೊಲೀಸರು ಹರಸಾಹನ ಪಟ್ಟಿದ್ದು, ಲಘು ಲಾಠಿ ಪ್ರಹಾರ ಮಾಡಿ ಜನರನ್ನು ಚದುರಿಸಿದರು.