ವಿಜಯಪುರ : ಮಂಗಳೂರು ವಳಚಿಲ್‌ನ ಎಕ್ಸ್‌ಫರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ನಿಖಿಲ್ ಸೊನ್ನದ ಅವರು ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ನಡೆದ ನೀಟ್(ರಾಷ್ಟ್ರೀಯ ಪ್ರವೇಶ ಪರೀಕ್ಷೆ)ನಲ್ಲಿ ರಾಷ್ಟಕ್ಕೆ 17ನೇ ರ‍್ಯಾಂಕ್ ಹಾಗೂ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ.
ಇವರು ವಿಜಯಪುರದ ಸಂಜೀವಿನಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯ ದಂಪತಿ ಡಾ.ಸಿದ್ದಪ್ಪ ಸೊನ್ನದ ಮತ್ತು ಡಾ.ಮೀನಾಕ್ಷಿ ಸೊನ್ನದ ಅವರ ಪುತ್ರರಾಗಿದ್ದಾರೆ.
ನಿಖಿಲ್ ಸೊನ್ನದ ಅವರು 720ಅಂಕಗಳಿಗೆ 670 ಅಂಕ ಗಳಿಸಿದ್ದಾರೆ.
ನೀಟ್‌ನಲ್ಲಿ ಉತ್ತಮ ಅಂಕದ ನಿರೀಕ್ಷೆ ಇತ್ತು. ಆದರೆ, ರಾಷ್ಟ್ರಮಟ್ಟದಲ್ಲಿ 17 ನೇ ಸ್ಥಾನ ಬರುತ್ತದೆ ಎಂದು ಅಂದುಕೊಂಡಿರಲಿಲ್ಲ. ಬಹಳ ಖುಷಿಯಾಗಿದೆ. ಏಮ್ಸ್‌ನಲ್ಲಿ ಪದವಿ ಓದಬೇಕೆಂದುಕೊಂಡಿರುವೆ. ನರರೋಗ ಶಸ್ತ್ರಚಿಕಿತ್ಸಕ ಆಗಬೇಕು ಎಂಬ ನನ್ನ ಆಶಯವಾಗಿದೆ. ನಮ್ಮ ಕಾಲೇಜಿ ಧ್ಯೇಯ ವಾಕ್ಯವಾದ ಶ್ರಮದೇವ ಜಯತೇ ಎಂಬುದು ನನ್ನನ್ನು ಪ್ರತಿದಿನ ಕಠಿಣ ಶ್ರಮ ಹಾಕಲು ಪ್ರೇರೇಪಣೆ ನೀಡಿತು. ಪ್ರತಿದಿನಿ ಬೆಳಿಗ್ಗೆ 7 ರಿಂದ ಸಂಜೆ 7ರ ತನಕ ತರಗತಿ ಹಾಗೂ ನೀಟ್ ಕೋಚಿಂಗ್ ಇರುತ್ತಿತ್ತು. ಕಾಲೇಜಿನ ಉಪನ್ಯಾಸಕರು ನಮಗೆ ಉತ್ತೇಜನ ನೀಡುತ್ತಿದ್ದರು ಎಂದು ನಿಖಿಲ್ ಸೊನ್ನದ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.





