Mysore
25
haze

Social Media

ಬುಧವಾರ, 28 ಜನವರಿ 2026
Light
Dark

ದರ್ಶನ್‌ ಅಭಿಮಾನಿಗಳಿಗೆ ವಿಜಯಲಕ್ಷ್ಮೀ ಮತ್ತೊಂದು ಸಂದೇಶ

vijaylakshmi ( darshan wife )

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಜೈಲುಪಾಲಾಗಿರುವ ನಟ ದರ್ಶನ್‌ ಅಭಿಮಾನಿಗಳಿಗೆ ಪತ್ನಿ ವಿಜಯಲಕ್ಷ್ಮೀ ಮತ್ತೊಂದು ಸಂದೇಶ ರವಾನೆ ಮಾಡಿದ್ದಾರೆ.

ದರ್ಶನ್‌ ನಿಮ್ಮೆಲ್ಲರನ್ನು ತನ್ನ ಹೃದಯದಲ್ಲಿ ಹೊತ್ತುಕೊಂಡಿದ್ದಾರೆ. ದರ್ಶನ್‌ ನಿಮ್ಮೊಂದಿಗೆ ನೇರವಾಗಿ ಕನೆಕ್ಟ್‌ ಆಗುವವರೆಗೂ ನಾನು ಅವರ ಸೋಷಿಯಲ್‌ ಮೀಡಿಯಾ ಹ್ಯಾಂಡಲ್‌ ಮಾಡುತ್ತೇನೆ. ದರ್ಶನ್‌ ಸಿನಿಮಾ ಅಪ್ಡೇಟ್‌ ಮತ್ತು ಪ್ರಚಾರಗಳನ್ನು ಹಂಚಿಕೊಳ್ಳುತ್ತೇನೆ. ನಿಮ್ಮ ಪ್ರೀತಿ, ಪ್ರಾರ್ಥನೆ, ತಾಳ್ಮೆ ದರ್ಶನ್‌ ಅವರಿಗೆ ಅಪಾರ ಶಕ್ತಿ ನೀಡುತ್ತದೆ.

ಈ ಏಕತೆ ಮತ್ತು ಸಕಾರಾತ್ಮಕತೆಯನ್ನು ಉಳಿಸಿಕೊಳ್ಳೋಣ. ಅವರು ಶೀಘ್ರದಲ್ಲೇ ಅದೇ ಪ್ರೀತಿ ಮತ್ತು ಶಕ್ತಿಯೊಂದಿಗೆ ಹಿಂತಿರುಗುತ್ತಾರೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಪೋಸ್ಟ್‌ ಮಾಡಿದ್ದಾರೆ.

ಇನ್ನು ನಿನ್ನೆ ಅಭಿಮಾನಿಗಳಿಗೆ ದರ್ಶನ್‌ ಕಳುಹಿಸಿದ ಸಂದೇಶವನ್ನು ಸಹ ಪೋಸ್ಟ್‌ ಮಾಡಿ, ಅಭಿಮಾನಿಗಳಿಗೆ ಧೈರ್ಯ ಹೇಳಿದ್ದಾರೆ.

Tags:
error: Content is protected !!