ಬೆಂಗಳೂರು: ಯುವಕನೊಂದಿಗೆ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಹಾಸನದ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣನ ಆಪ್ತ ಸಹಾಯಕ ಶಿವಕುಮಾರ್ ವಿರುದ್ಧವೂ ಸಂತ್ರಸ್ತ ದೂರು ದಾಖಲಿಸಿದ್ದಾರೆ.
ತನ್ನ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದ ಕುರಿತು ಎಲ್ಲಾ ವಿಷಯವನ್ನು ಸೂರಜ್ ಆಪ್ತ ಶಿವಕುಮಾರ್ ಬಳಿ ಹೇಳಿದ್ದೆ. ಆತ ನನ್ನನ್ನು ಕೂಡಿಹಾಕಿ 2 ಕೋಟಿ ರೂ. ಆಮಿಷ ಹಾಗೂ ಉದ್ಯೋಗ ಕೊಡಿಸುವುದಾಗಿ ಹೇಳಿದ್ದ. ಹಾಗೂ ಈ ವಿಷಯವನ್ನು ಯಾರಿಗಾದರೂ ಹೇಳಿದ್ದೆ ಆದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆಯನ್ನು ಸಹಾ ಹಾಕಿದ್ದ ಎಂದು ಸಂತ್ರಸ್ತ ಶಿವಕುಮಾರ್ ವಿರುದ್ಧ ದೂರು ದಾಖಲಿಸಿದ್ದಾನೆ.
ಸಂತ್ರಸ್ತ ನೀಡಿದ ದೂರನಿಲ್ಲೇನಿದೆ?: ಸೂರಜ್ ರೇವಣ್ಣರಿಂದ ಅಸಹಜ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದರು, ನನ್ನನ್ನು ಆಸ್ಪತ್ರೆಗೆ ಬಿಡದೇ ಕೊಠಡಯೊಂದರಲ್ಲಿ ಶಿವಕುಮಾರ್ ಕೂಡಿ ಹಾಕಿದ್ದನು. ನನ್ನ ಬಳಿಯಿಂದಲೇ 1000 ರೂ. ಹಣಪಡೆದು ಊಟ ಕೊಡಿಸಿ ಬಳಿಕ ಸೂರಜ್ ರೇವಣ್ಣ ಜತೆ ಮಾತನಾಡಿಸಿದರು. ಅವರು ನನಗೆ 2 ಕೋಟಿ ಹಣ ಹಾಗೂ ಉದ್ಯೋಗ ನೀಡುವ ಭರವಸೆಯನ್ನು ನೀಡಿದರು. ಆದರೆ ನಾನು ಒಪ್ಪದಿದ್ದಾಗ ನಿನ್ನನ್ನು ಮುಗಿಸುವೇ ಎಂದು ಗದರಿಸಿದ್ದರು ಎಂದು ಹೇಳಿದರು
ನನ್ನನ್ನು ಮನೆಗೆ ಕಳುಹಿಸದೇ ಲಾಡ್ಜ್‌ನಲ್ಲಿ ಕೂಡಿಹಾಕಿದ್ದ ಸೂರಜ್ ಆಪ್ತ ಶಿವಕುಮಾರ್ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಸಂತ್ರಸ್ತ ಅಳಲು ತೋಡಿಕೊಂಡಿದ್ದಾನೆ.