ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಬಳ್ಳಾರಿ ಲೋಕಸಭಾ ಚುನಾವಣೆಗೆ ಬಳಸಲಾಗಿದೆ ಎಂದು ಇ.ಡಿ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣವನ್ನು ಲೋಕಸಭಾ ಚುನಾವಣೆಗೆ ಬಳಸಲಾಗಿದೆ ಎಂದು ಮಾಜಿ ಸಚಿವ ಬಿ.ನಾಗೇಂದ್ರ ಅವರ ಆಪ್ತ ಸಹಾಯಕ ವಿಜಯ್ ಕುಮಾರ್ ಗೌಡ ಮೊಬೈಲ್‌ನ ಸ್ಕ್ರೀನ್‌ಶಾಟ್ ಫೋಟೋಗಳ ಮೂಲಕ ಮತ್ತು ಫೋನಿನ ಅನೇಕ ಸಂಭಾಷಣೆಗಳ ಮೂಲಕ ತಿಳಿಯುತ್ತದೆ ಎಂದು ಇ.ಡಿ ಸ್ಪಷ್ಟನೆ ನೀಡಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯ್‌ಕುಮಾರ್ ಗೌಡರ ಹೇಳಿಕೆಯನ್ನು ಉಲ್ಲೇಖಿಸಿದ ಇ.ಡಿ ಅಧಿಕಾರಿಗಳು ವಾಲ್ಮೀಕಿ ಅಭಿವೃದ್ಧಿ ನಿಗಮದ ಆರೋಪಿ ಬಿ.ನಾಗೇಂದ್ರ ಅವರ ಜಾಮೀನು ಅರ್ಜಿಗೆ ತನ್ನ ಆಕ್ಷೇಪಣೆ ವ್ಯಕ್ತಪಡಿಸಿದೆ.
ಅಲ್ಲದೇ, ಚುನಾವಣೆಗೆ ಬೇಕಾದ ಹಣವನ್ನು ವರ್ಗಾಯಿಸಲು ಅಧಿಕಾರಿಗಳ ಮೇಲೆ ಒತ್ತಡ ಹೇರುವ ಮುಖಾಂತರ ಮೋಸದ ಚಟುವಟಿಕೆ ರೂಪಿಸುವಲ್ಲಿ ನಾಗೇಂದ್ರ ಮುಖ್ಯ ಪಾತ್ರ ವಹಿಸಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಚುನಾವಣೆಯ ಸಂದರ್ಭದಲ್ಲಿ ನಗದು ನಿರ್ವಹಣೆಯ ಜೊತೆಗೆ ವೈಯಕ್ತಿಕ ಹಾಗೂ ಚುನಾವಣಾ ವೆಚ್ಚಗಳಿಗೆ ಬಳಸಲಾಗಿದೆ ಎಂದು ಗಂಭೀರ ಆರೋಪ ಮಾಡಲಾಗಿದೆ.
ಈ ನಿಗಮದ ಹಣವನ್ನು ನಿರ್ವಹಣೆ ಮಾಡುವ ಕಾರ್ಯದಲ್ಲಿ ವಿಜಯ್ ಕುಮಾರ್ ಗೌಡ ವಹಿಸಿಕೊಂಡಿದ್ದು, ಆರೋಪಿ ನೆಕ್ಕುಂಟಿ ನಾಗರಾಜ್ ಸಲಹೆಯ ಮೇರೆಗೆ ಮತ್ತೋರ್ವ ಆರೋಪಿ ಎಡರು ರುದ್ರಯ್ಯನಿಗೆ ಆರೋಪಿ ವಿಜಯ್ ಎಂಬಾತ 61 ಕೋಟಿ ರೂಗಳನ್ನು ನೀಡಿದ್ದಾನೆ ಎಂದು ವರದಿ ಮಾಡಲಾಗಿದೆ.