ಶಿವಮೊಗ್ಗ: ಕೇಂದ್ರ ಸರ್ಕಾರದ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ ಕುಮಾರಸ್ವಾಮಿ ಇಂದು(ಜೂ.30) ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಭೇಟಿ ನೀಡಿ, ಪರೀಶಿಲನೆ ಮಾಡಿದರು.
ಈ ಬಗ್ಗೆ ತಮ್ಮ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಸಚಿವರು, ಮೈಸೂರು ಮಹಾರಾಜರ ದೂರದೃಷ್ಟಿಯೊಂದಿಗೆ ಸರ್ ಎಂ.ವಿಶ್ವೇಶ್ವರಯ್ಯ ಅವರು ಸ್ಥಾಪಿಸಿರುವ ಇಡೀ ಕಾರ್ಖಾನೆಯ ಸ್ಥಿತಿಗತಿಗಳನ್ನು ಗಮನಿಸಿದ್ದೇನೆ. ಅಧಿಕಾರಿಗಳ ಜತೆ ಸಭೆಯನ್ನೂ ಮಾಡಿ, ಸ್ಥಳೀಯ ಜನರು ಹಾಗೂ ಕಾರ್ಮಿಕರ ಅಹವಾಲು ಆಲಿಸಿದ್ದೇನೆ.
ಪ್ರಧಾನ ಮಂತ್ರಿ ಮೋದಿ ಅವರ ಆತ್ಮನಿರ್ಭರ್ ಪರಿಕಲ್ಪನೆ ದೇಶೀಯ ಕೈಗಾರಿಕಾ ವಲಯಕ್ಕೆ ಸಂಜೀವಿನಿಯಾಗಿದೆ. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತೇವೆ ಎಂದು ಬರೆದುಕೊಂಡಿದ್ದಾರೆ.