ನವದೆಹಲಿ: ಯುಜಿಸಿ ನೆಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿ ಬಂದ ಹಿನ್ನೆಲೆ ಪರೀಕ್ಷೆ ನಡೆದ ಮರುದಿನವೇ ಪರಿಕ್ಷೇಯನ್ನೇ ರದ್ದುಗೊಳಿಸಿ ಯುಜಿಸಿ ಆದೇಶಿಸಿತ್ತು. ಇದೀಗ ಈ ಪ್ರಕರಣವನ್ನು ಸಿಬಿಐಗೆ ವಹಿಸಿದ್ದು, ಸಿಬಿಐ ತನಿಖೆಯನ್ನು ಆರಂಭಿಸಿದೆ.
ಜೂನ್ 18 ರಂದು ನಡೆದ ಯುಜಿಸಿ ನೆಟ್ ಪರೀಕ್ಷೆಯಲ್ಲಿ ಡಾರ್ಕ್‌ನೆಟ್‌ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು ಎನ್ನಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಸಿಬಿಐ ತನಿಖೆಯನ್ನು ಆರಂಭಿಸಿದೆ.
ಯುಜಿಸಿಯು ಜೂನ್ 18 ರಂದು ದೇಶದ ವಿವಿಧೆಡೆ ಎರಡು ಪಾಳಿಯಲ್ಲಿ ನೆಟ್ ಪರೀಕ್ಷೆಯನ್ನು ನಡೆಸಿತ್ತು.