ಬೆಂಗಳೂರು: ಮುಂದಿನ 10 ದಿನದಲ್ಲಿ ಬಂಗಾಳಕೊಲ್ಲಿಯಲ್ಲಿ ಎರಡು ವಾಯುಭಾರ ಕುಸಿತ ಉಂಟಾಗಲಿದೆ ಎನ್ನಲಾಗಿದ್ದು, ಇದರ ಪ್ರಭಾವದಿಂದ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಮೊದಲ ವಾಯುಭಾರ ಕುಸಿತ ಒಂದೆರಡು ದಿನದಲ್ಲಿ ತೀವ್ರ ಸ್ವರೂಪ ಪಡೆದು ಕಾಣಿಸಿಕೊಳ್ಳಲಿದ್ದು, ಇದರ ಪ್ರಭಾವದಿಂದ ದಕ್ಷಿಣ ಒಳನಾಡಿದ ಬಹುತೇಕ ಎಲ್ಲಾ ಜಿಲ್ಲೆಗಳು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಡಿಸೆಂಬರ್. 14 ಹಾಗೂ 15ರಂದು ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ.
ಎರಡನೇ ವಾಯುಭಾರ ಕುಸಿತವು ಡಿಸೆಂಬರ್.16ರ ಬಳಿಕ ರೂಪುಗೊಳ್ಳಲಿದ್ದು, ಇದರಿಂದ ಡಿಸೆಂಬರ್.17 ಹಾಗೂ 18ರಂದು ರಾಜ್ಯದಲ್ಲಿ ಭಾರೀ ಮಳೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನು ರಾಜ್ಯದಲ್ಲಿ ಬಹುತೇಕ ಬೆಳೆಗಳು ಕಟಾವಿಗೆ ಬಂದಿದ್ದು, ರೈತರು ಎಚ್ಚರಿಕೆ ವಹಿಸುವುದು ಅನಿವಾರ್ಯವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.





