Mysore
29
few clouds

Social Media

ಮಂಗಳವಾರ, 11 ಮಾರ್ಚ್ 2025
Light
Dark

ಭರ್ತಿಯತ್ತ ಸಾಗಿದ ತುಂಗಭದ್ರೆ ಡ್ಯಾಂ : ೨೪ ಗಂಟೆಯಲ್ಲಿ ಹರಿದು ಬಂತು ಬರೋಬ್ಬರಿ ೪ ಟಿಎಂಸಿ ನೀರು

ಕೊಪ್ಪಳ : ಬೇಸಿಗೆ ಸಮಯದಲ್ಲಿ ನೀರೇ ಇಲ್ಲದೆ ಡೆಡ್‌ ಸ್ಟೋರ್‌ ಗೆ ಇಳಿದಿದ್ದಂತಹ ತುಂಗಭದ್ರ ಜಲಾಶಯಕ್ಕೆ ೨೪ ಗಂಟೆಯಲ್ಲಿ ಬರೋಬ್ಬರಿ ೪ ಟಿಎಂಸಿ ನೀರು ಹರಿದು ಬಂದಿದ್ದು, ಜಲಾಶಯಕ್ಕೆ ಜೀವ ಕಳೆ ಬಂದಿದೆ.

ಮಲೆನಾಡು ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಕಾರಣದಿಂದ ತುಂಗಾಭದ್ರಾ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದೆ. ಜಲಾಶಯಕ್ಕೆ ೫೦೯೭೧ ಕ್ಯೂಸೆಕ್‌ ನೀರು ಹರಿದುಬರುತ್ತಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ೧೩೫೯೧ ಟಿಎಂಸಿ ಇದ್ದ ನೀರು ಇಂದು ಏಕಾಏಕಿ ಡ್ಯಾಂನಲ್ಲಿ ೧೭೯೧೨ ಟಿಎಂಸಿ ನೀರು ಸಂಗ್ರಹವಾಗಿದೆ. ಈ ಮೂಲಕವಾಗಿ ಕಳೆದ ೨೪ ಗಂಟೆಯಲ್ಲಿ ೪ ಟಿಎಂಸಿ ನೀರು ಸಂಗ್ರಹವಾಗಿದೆ.

ಇದೇ ರೀತಿ ನೀರಿನ ಒಳ ಹರಿವು ಬಂದರೆ ಈ ವಾರದಲ್ಲೆ ಜಲಾಶಯ ಬಹುತೇಕ ಭರ್ತಿಯಾಗಲಿದೆ. ಇಂದರಿಂದಾಗಿ ನಾಲ್ಕು ಜಿಲ್ಲೆಗಳಿಗೆ ಮಾತ್ರವಲ್ಲ ಆಂಧ್ರಪದೇಶದ ರೈತರಿಗೂ ಅನುಕೂಲವಾಗಲಿದೆ. ಈ ಜಲಾಶಯದ ನೀರನ್ನ ಕೇವಲ ಕೃಷಿ ಚಟುವಟಿಕೆಗೆ ಮಾತ್ರ ಬಳಕೆ ಮಾಡುತ್ತಿಲ್ಲ. ನಾಲ್ಕು ಜಿಲ್ಲೆಯ ಜನರು ಕುಡಿಯಲು ಈ ನೀರನ್ನ ಬಳಕೆ ಮಾಡುತ್ತಿದ್ದಾರೆ.

Tags: