ಬೆಂಗಳೂರು: ಉತ್ತರಕಾಂಡ್‌ನ ಚಾರಣಕ್ಕೆ ತೆರಳಿ ಹವಾಮಾನ ವೈಪರೀತ್ಯದಿಂದ ಅಪಾಯಕ್ಕೆ ಸಿಲುಕಿದ್ದ 23 ಮಂದಿ ಕನ್ನಡಿಗರ ಪೈಕಿ, ರಕ್ಷಿಸಲ್ಪಟ್ಟ 13 ಮಂದಿಯ ತಂಡವು ಗುರಾವಾರ(ಜೂ.6) ರಾತ್ರಿ ಬೆಂಗಳೂರಿಗೆ ಬಂದಿಳಿದಿದ್ದಾರೆ.
ನಗರದ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾಜ್ಯ ವಿಪತ್ತು ನಿರ್ವಹಣದ ಉಪಾಧ್ಯಕ್ಷ ಹಾಗೂ ಕಂದಾಯ ಸಚಿವರೂ ಆದ ಕೃಷ್ಣಬೈರೆಗೌಡ ಅವರು ಜೊತೆ ವಿಮಾನದಲ್ಲಿ 13 ಮಂದಿ ಕನ್ನಡಿಗರು ಆಗಮಿಸಿದ್ದಾರೆ. ಚಾರಣಿಗರ ಬರುವಿಕೆಗಾಗಿ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದ ಅವರ ಕುಟುಂಬ ಸಂಸತದಿಂದ ಬರಮಾಡಿಕೊಂಡಿತು.
ಇನ್ನೂ ಹವಮಾನ ವೈಪರೀತ್ಯದಿಂದ ಮೃತಪಟ್ಟವರ ಸಂಖ್ಯೆ 9 ಕ್ಕೆ ಏರಿದೆ. ಬುಧುವಾರ(ಜೂ.5) ಐದು ಮೃತದೇಹಗಳು ಸಿಕ್ದಿ, ಇನ್ನೂ ಉಳಿದ ನಾಲ್ವರ ಮೃತದೇಹವನ್ನು ಗುರುವಾರ(ಜೂ.6)ರ ಕಾರ್ಯಚರಣೆಯಲ್ಲಿ ಪತ್ತೆ ಹಚ್ಚಲಾಗಿದೆ.
ರಕ್ಷಿಸಲ್ಪಟ್ಟ ೧೩ ಮಂದಿ ಚಾರಣಿಗರನ್ನು ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಕರೆತರಲಾಗಿದೆ.