Mysore
19
broken clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಕೆಎಸ್‌ಆರ್‌ಟಿಸಿಯ 20 ‘ನಮ್ಮ ಕಾರ್ಗೋ’ ಟ್ರಕ್‌ಗಳಿಗೆ ಸಾರಿಗೆ ಸಚಿವ ಚಾಲನೆ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 20 ನಮ್ಮ ಕಾರ್ಗೋ ಟ್ರಕ್‌ಗಳಿಗೆ ಇಂದು(ಶನಿವಾರ) ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಕೆಎಸ್‌ಆರ್‌ಟಿಸಿ ಮುಂದಿನ ಕೆಲವು ದಿನಗಳಲ್ಲಿ 100 ಟ್ರಕ್‌ಗಳು ಸೇರ್ಪಡೆಗೊಳ್ಳಲಿವೆ. ಒಂದು ವರ್ಷದೊಳಗೆ 500 ಟ್ರಕ್‌ಗಳಿಗೆ ತನ್ನ ಕಾರ್ಗೋ ಫ್ಲೀಟ್ ಅನ್ನು ವಿಸ್ತರಿಸಲು ಯೋಜಿಸಲಾಗಿದೆ ಎಂದು ಹೇಳಿದರು.

ಇನ್ನು ಈ ಹೊಸ ಟ್ರಕ್‌ಗಳನ್ನು ಟಾಟಾದ ಪುಣೆ ತಯಾರಿಕ ಘಟಕದಲ್ಲಿ ತಯಾರಿಸಲಾಗಿದ್ದು, ಇದನ್ನು ರಾಜ್ಯದೊಳಗೆ ಸರಕು ಸಾಗಿಸಲು ಬಳಸಲಾಗುತ್ತದೆ. ಈಗ 20 ಟ್ರಕ್​ಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಇದರ ಪ್ರತಿಕ್ರಿಯೆಯನ್ನು ನೋಡಿದ ನಂತರ ಒಂದು ತಿಂಗಳಲ್ಲಿ 100 ಮತ್ತು ಒಂದು ವರ್ಷದಲ್ಲಿ 500 ಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದರು.

ಪೀಣ್ಯದ ಬಸವೇಶ್ವರ ಬಸ್‌ ನಿಲ್ದಾಣವನ್ನು ಟ್ರಕ್‌ಗಳ ಕಾರ್ಯಾಚರಣೆ ಮತ್ತು ಡಿಪೋವಾಗಿ ಬಳಸಿಕೊಳ್ಳಲಾಗುವುದು. ಉಳಿದ ಜಾಗವನ್ನು ವಾಣಿಜ್ಯ ಆದಾಯ ಗಳಿಸಲು ಸರ್ಕಾರಿ ಕಂಪೆನಿಗಳಿಗೆ ನೀಡಲಾಗುವುದು. ಇದೀಗ ಸಾರಿಗೆ ಸಂಸ್ಥೆ ಹೆಚ್ಚು ಭಾರವಾದ ಸರಕುಗಳನ್ನು ಸಾಗಿಸಲು ಟ್ರಕ್‌ಗಳನ್ನು ಬಳಸಲಾಗುತ್ತಿದ್ದು, ಈ ಆರು ಚಕ್ರದ ಟ್ರಕ್‌ಗಳಲ್ಲಿ 6ಟನ್‌ ಸರಕನ್ನು ಸಾಗಿಸಬಹುದಾಗಿದೆ.

ಕೆಎಸ್‌ಆರ್‌ಟಿಸಿ ಸಂಸ್ಥೆ ಪ್ರಕಾರ, ಈ ಟ್ರಕ್‌ಗಳು ಬೆಂಗಳೂರು, ಮೈಸೂರು, ತುಮಕೂರು, ಹಾಸನ, ಮಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ಕೋಲಾರ, ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧ ಸ್ಥಳಗಳಿಂದ ಕಾರ್ಯನಿರ್ವಹಿಸುತ್ತದೆ. ಉತ್ತಮ ಪ್ರತಿಕ್ರಿಯೆ ಬಂದರೆ ಇನ್ನಷ್ಟು ಜಿಲ್ಲೆಗಳಿಂದ ಸಂಚರಿಸಲಿದೆ. ಈ ಟ್ರಕ್‌ಗಳು ಆರಂಭದಲ್ಲಿ ಸಾರಿಗೆ ಔಷಧೀಯ, ಜವಳಿ, ಆಹಾರ ಮತ್ತು ಆತಿಥ್ಯ ಉದ್ಯಮಗಳಿಂದ ಸರಕುಗಳನ್ನು ಸಾಗಿಸಲು ಯೋಜನೆ ರೂಪಿಸಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ