Mysore
24
haze

Social Media

ಶನಿವಾರ, 06 ಡಿಸೆಂಬರ್ 2025
Light
Dark

ವರ್ತಿಕಾ ಕಟಿಯಾರ್‌ ದೂರು: ಐಎಸ್‌ಡಿಯಿಂದ ಐಜಿಪಿ ಡಿ.ರೂಪಾ ವರ್ಗಾವಣೆ

ಬೆಂಗಳೂರು: ರಾಜ್ಯದಲ್ಲಿ ಇಬ್ಬರು ಐಪಿಎಸ್‌ ಅಧಿಕಾರಿಗಳ ಸಂಘರ್ಷ ಸರ್ಕಾರಕ್ಕೆ ತೀವ್ರ ಮುಜುಗರ ಉಂಟು ಮಾಡಿದ್ದ ಬೆನ್ನಲ್ಲೇ ಇದೀಗ ಐಎಸ್‌ಡಿಯಿಂದ ಐಜಿಪಿ ಡಿ.ರೂಪಾ ವರ್ಗಾವಣೆ ಮಾಡಲಾಗಿದೆ.

ಕಳೆದ ಫೆಬ್ರವರಿ.20ರಂದು ವರ್ತಿಕಾ ಕಟಿಯಾರ್‌ 2000ನೇ ಬ್ಯಾಚ್‌ನ ಅಧಿಕಾರಿಯಾಗಿರುವ ಡಿ.ರೂಪಾ ವಿರುದ್ಧ ಸಿಎಸ್‌ಗೆ ದೂರು ನೀಡಿದ್ದರು.

ಕಳೆದ ವರ್ಷ ಅನುಮತಿಯಿಲ್ಲದೇ ಸೆಪ್ಟೆಂಬರ್.‌6ರಂದು ಅನುಮತಿಯಿಲ್ಲದೇ ಚೇಂಬರ್‌ನಿಂದ ಮಹತ್ವದ ಕಡತಗಳನ್ನು ಪೊಲೀಸ್‌ ಸಿಬ್ಬಂದಿಯಿಂದ ಡಿ.ರೂಪಾ ತರಿಸಿಕೊಂಡಿದ್ದಾರೆ ಎಂದು ಉಲ್ಲೇಖಿಸಿದ್ದರು.

ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಎರಡು ದಿನಗಳ ಹಿಂದೆಯಷ್ಟೇ ವರ್ತಿಕಾ ಕಟಿಯಾರ್‌ರನ್ನು ಗೃಹರಕ್ಷಕ ಮತ್ತು ಪೌರ ರಕ್ಷಣಾ ದಳದ ಡಿಐಜಿ ಹುದ್ದೆಗೆ ಸರ್ಕಾರ ವರ್ಗಾವಣೆ ಮಾಡಿತ್ತು.

ಈ ಬೆನ್ನಲ್ಲೇ ಇದೀಗ ಡಿ.ರೂಪಾ ಅವರನ್ನು ಐಎಸ್‌ಡಿಯಿಂದ ಕರ್ನಾಟಕ ಸಿಲ್ಕ್‌ ಬೋರ್ಡ್‌ ಎಂಡಿಗೆ ಹುದ್ದೆಗೆ ವರ್ಗಾವಣೆ ಮಾಡಿದೆ.

Tags:
error: Content is protected !!