ಬೆಂಗಳೂರು: ರೆಸಿಡೆಂಟ್ ಡಾಕ್ಟರ್ಸ್ ಸ್ಟೈಫಂಡ್ ಹೆಚ್ಚಳಕ್ಕೆ ಆಗ್ರಹಿಸಿ ನಾಳೆಯಿಂದ ಸರ್ಕಾರಿ ವೈದ್ಯರು ಪ್ರತಿಭಟನೆ ನಡೆಸಲಿದ್ದಾರೆ.
ವೈದ್ಯರು ಪ್ರತಿಭಟನೆ ಮಾಡಲಿರುವ ಹಿನ್ನೆಲೆಯಲ್ಲಿ ನಾಳೆ ಸರ್ಕಾರಿ ಆಸ್ಪತ್ರೆಗಳಲ್ಲಿ ಓಪಿಡಿ ಸೇವೆ ಸಂಪೂರ್ಣ ಬಂದ್ ಆಗಲಿದೆ. ಇನ್ನು ತುರ್ತು ಸೇವೆಗಳು ಎಂದಿನಂತೆ ಲಭ್ಯವಿರಲಿದೆ.
ನಾಳೆ ಫ್ರೀಡಂ ಪಾರ್ಕ್‌ನಿಂದ ಪ್ರತಿಭಟನೆ ನಡೆಸಲು ಸಕಲ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಸರ್ಕಾರ ಬೇಡಿಕೆ ಈಡೇರಿಸುವವರೆಗೂ ಸಹ ಪ್ರತಿಭಟನೆ ನಡೆಸಲಾಗುತ್ತದೆ ಎಂದು ವೈದ್ಯರು ಪಟ್ಟು ಹಿಡಿದಿದ್ದಾರೆ.
ನಾಳೆ ನಡೆಯುವ ಪ್ರತಿಭಟನೆಯಲ್ಲಿ ಆರು ಸಾವಿರಕ್ಕೂ ಹೆಚ್ಚಿನ ವೈದ್ಯರು ಭಾಗಿಯಾಗಲಿದ್ದು, ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರರೋಗಿಗಳಿಗೆ ವಿವಿಧ ರೀತಿಯ ಸಮಸ್ಯೆ ಆಗಲಿದೆ.
ಇನ್ನು ರೆಸಿಡೆಂಟ್ ಡಾಕ್ಟರ್ಸ್ ಸ್ಟೈಫಂಡ್ ಹೆಚ್ಚಳ ಮಾಡುವಂತೆ ಈ ಮೊದಲೇ ಸರ್ಕಾರಕ್ಕೆ ವೈದ್ಯರು ಮನವಿ ಮಾಡಿದ್ದರು. ಆದ್ರೆ ಈವರೆಗೂ ಸರ್ಕಾರ ಮಾತ್ರ ವೈದ್ಯರ ಮನವಿಗೆ ಕ್ಯಾರೆ ಎಂದಿಲ್ಲ. ಹೀಗಾಗಿ ರೊಚ್ಚಿಗೆದ್ದ ಸರ್ಕಾರಿ ವೈದ್ಯರು ನಾಳೆಯಿಂದ ಪ್ರತಿಭಟನೆ ನಡೆಸಲಿದ್ದು, ಬೇಡಿಕೆ ಈಡೇರುವವರೆಗೂ ಧರಣಿ ನಿಲ್ಲಿಸಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ವೈದ್ಯರು ಪ್ರತಿಭಟನೆ ನಡೆಸಲಿರುವ ಹಿನ್ನೆಲೆಯಲ್ಲಿ ನಾಳೆ ಸರ್ಕಾರಿ ಆಸ್ಪತ್ರೆಗಳಲ್ಲಿ ಓಪಿಡಿ ಸಂಪೂರ್ಣ ಬಂದ್ ಆಗಲಿದ್ದು, ರೋಗಿಗಳು ಪರದಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಲಿದೆ.