Mysore
27
scattered clouds

Social Media

ಮಂಗಳವಾರ, 16 ಡಿಸೆಂಬರ್ 2025
Light
Dark

ಇಂದು ಅಂಬರೀಶ್‌ ಜನ್ಮದಿನ; ಅಂಬಿ ನೆನೆದು ಭಾವುಕರಾದ ಸುಮಲತಾ

ಮೈಸೂರು: ಮಂಡ್ಯದ ಗಂಡು, ರೆಬಲ್‌ ಸ್ಟಾರ್‌ ಅಂಬರೀಶ್‌ ಅವರ 72 ನೇ ಜನ್ಮದಿನವಿಂದು, ಅಂಬಿ ಅವರ ಹುಟ್ಟುಹಬ್ಬಕ್ಕೆ ನಟ ದರ್ಶನ್‌ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಕನ್ವರ್‌ಲಾಲ್‌ ಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

ಅಂಬಿ ಅಭಿಮಾನಿಗಳು ಇಂದು ಸಂಭ್ರಮ, ಸಡಗರದಿಂದಲೇ ಆಚರಿಸಿದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ ಸುಮಲತಾ ಅಂಬರೀಶ್‌ ಅವರು ಅಂಬಿ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇಂದು(ಮೇ.೨೯) ಬೆಳಿಗ್ಗೆಯೇ ಅಂಬಿ ಸಮಾಧಿ ಬಳಿ ಪತ್ನಿ ಸುಮಲತಾ ಅಂಬರೀಶ್‌, ಪುತ್ರ ಅಭಿಷೇಕ್‌ ಅಂಬರೀಶ್‌, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಆಗಮಿಸಿ, ಪೂಜೆ ಮಾಡಿ, ನಮನ ಸಲ್ಲಿಸಿದರು. ಕುಟುಂಬಸ್ಥರು ಪೂಜೆ ಸಲ್ಲಿಸಿದ ಬಳಿಕ ಅಭಿಮಾನಿಗಳು ಸಹ ತಮ್ಮ ನೆಚ್ಚಿನ ನಟನ ಸಮಾಧಿ ಬಳಿ ಆಗಮಿಸಿ ಸ್ಮರಿಸಿದರು.

ಪತಿ ಅಂಬರೀಶ್‌ ನೆನೆದು ಪತ್ನಿ ಸುಮಲತಾ ಭಾವುಕ ಪೋಸ್ಟ್‌ ಹಂಚಿಕೊಂಡಿದ್ದಾರೆ. ʻನಿಮ್ಮನ್ನು ನೆನಪಿಸಿಕೊಂಡಾಗಲೆಲ್ಲಾ ತುಟಿ ಅಂಚಲ್ಲಿ ಮಂದಹಾಸ ಮೂಡುತ್ತಿದೆ. ನಿಮ್ಮನ್ನ ಕಳೆದುಕೊಂಡ ನೋವು ನಮ್ಮಲ್ಲಿ ಸದಾ ಇರುತ್ತದೆ. ಪ್ರತಿ ದಿನ, ಪ್ರತಿ ಕ್ಷಣ ಎಂದೆಂದಿಗೂ ನೀವು ನಮ್ಮ ಜೀವನದ ಒಂದು ಭಾಗ. ನೀವು ಬದುಕನ್ನು ಮೀರಿದವರು. ನೀವೇ ನಮ್ಮ ಜೀವನ. ಸ್ವರ್ಗದಲ್ಲಿ ನಿಮಗೆ ಜನ್ಮದಿನದ ಶುಭಾಶಯಗಳುʼ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಸುಮಲತಾ ಅಂಬರೀಶ್‌ ಬರೆದುಕೊಂಡಿದ್ದಾರೆ.

ಕನ್ನಡ ಚಿತ್ರರಂಗದ ಕನ್ವರ್‌ಲಾಲ್‌ ಅಂಬಿ ೨೦೧೮ ನವೆಂಬರ್‌ ೨೪ ರಂದು ಹೃದಯಾಘಾತದಿಂದ ನಿಧನರಾದರು.‌  ಅಂಬರೀಶ್ ಚಿತ್ರರಂಗದಲ್ಲಿಷ್ಟೆ ಅಲ್ಲದೇ ರಾಜಕೀಯದಲ್ಲೂ ಸಕ್ರಿಯವಾಗಿದ್ದರು.

Tags:
error: Content is protected !!