ಬೆಂಗಳೂರು: ಬೆಂಗಳೂರು ನಗರದ ವೈಯಾಲಿಕಾವಲ್‌ನಲ್ಲಿರುವ ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಪೂರೈಕೆಯಾಗುತ್ತಿದ್ದ ಲಡ್ಡು ಪ್ರಸಾದವನ್ನು ಆಂಧ್ರದ ತಿರುಪತಿ ತಿರುಮಲ ದೇವಾಲಯಂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದು ಟಿಟಿಡಿ ಆಡಳಿತ ಮಂಡಳಿ ವರದಿ ಮಾಡಿದೆ.
ಟಿಟಿಡಿ ಆಡಳಿತ ಮಂಡಳಿಯ ವರದಿ ಮೇರೆಗೆ ತಿರುಪತಿಯಲ್ಲಿ ಬ್ರಹ್ನೋತ್ಸವ ಇರುವ ಕಾರಣ ತಿಮ್ಮಪ್ಪನ ಸನ್ನಿಧಿಯಲ್ಲಿ ಅಧಿಕವಾಗಿ ಭಕ್ತರ ಸಂಖ್ಯೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಬೆಟ್ಟದಿಂದ ಲಡ್ಡು ಪೂರೈಸುವ ವಾಹನಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ಹೀಗಾಗಿ ನಮ್ಮ ಆಡಳಿತ ಅಕ್ಟೋಬರ್.12ರವರೆಗೆ ಬೆಂಗಳೂರಿನ ತಿರುಪತಿ ದೇವಸ್ಥಾನಕ್ಕೆ ಲಡ್ಡು ಸರಬರಾಜನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ.