Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ತಿರುಪತಿ ದೇವಾಲಯದ ಅಕ್ರಮ ತನಿಖೆಗೆ ವಿಶೇಷ ತಂಡ ರಚನೆ

ಅಮರಾವತಿ: ತಿರುಪತಿ ದೇವಾಲಯದ ಲಡ್ಡು ತಯಾರಿಕೆಯಲ್ಲಿ ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬನ್ನು ಕಲಬೆರಕೆ ಮಾಡಲಾಗಿದೆ ಎಂಬ ವಿವಾದದ ಬೆನ್ನಲ್ಲೇ ದೇವಾಲಯದ ಅವ್ಯವಹಾರಗಳ ತನಿಖೆಗೆ ಸಿಎಂ ಚಂದ್ರಬಾಬು ನಾಯ್ಡು ವಿಶೇಷ ತನಿಖಾ ತಂಡವನ್ನು ರಚನೆ ಮಾಡಿದ್ದಾರೆ.

ಕಳೆದ ಐದು ವರ್ಷಗಳಿಂದ ದೇವಾಲಯದ ನಿರ್ವಹಣೆಯಲ್ಲಿ ಹಲವಾರು ಅಕ್ರಮಗಳನು ಎಸಗಲಾಗಿದೆ ಎಂದು ಸರ್ಕಾರ ಗಂಭೀರ ಆರೋಪ ಮಾಡಿದ್ದು, ಎಲ್ಲಾ ಪ್ರಕರಣವನ್ನು ಸಂಪೂರ್ಣ ತನಿಖೆ ನಡೆಸಲು ತೀರ್ಮಾನ ಮಾಡಿದೆ.

ಈ ಹಿನ್ನೆಲೆಯಲ್ಲಿ ತನಿಖೆ ನಡೆದ ಬಳಿಕ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿರ್ಧಾರ ಮಾಡಲಾಗಿದ್ದು, ತಪ್ಪು ಮಾಡಿದವರಿಗೆ ಈಗ ನಡುಕ ಶುರುವಾಗಿದೆ.

ಕಳೆದ ಐದು ವರ್ಷದಲ್ಲಿ ತಿರುಮಲದಲ್ಲಿ ಅನೇಕ ಅಪವಿತ್ರ ಕೆಲಸಗಳನ್ನು ಮಾಡಲಾಗಿದ್ದು, ಮಾಜಿ ಸಿಎಂ ಜಗನ್‌ ಮೋಹನ್‌ ರೆಡ್ಡಿ ಅವರು ತಮ್ಮ ನಿಕಟವರ್ತಿಗಳನ್ನು ದೇವಾಲಯದ ಆಡಳಿತ ಮಂಡಳಿ ಸದಸ್ಯರನ್ನಾಗಿ ನೇಮಿಸಿ ರಾಜಕೀಯ ಲಾಭ ಪಡೆದುಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದೆ.

 

 

Tags: