ರಾಮನಗರ: ಇದು ಡಿ.ಕೆ.ಶಿವಕುಮಾರ್ ಸಿಎಂ ಆಗುವ ಉಪಚುನಾವಣೆ ಎಂದು ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ.
ಈ ಕುರಿತು ರಾಮನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಉಪಚುನಾವಣೆ ಫಲಿತಾಂಶ ಡಿಕೆಶಿ ನಾಯಕತ್ವವನ್ನು ತೋರಿಸುತ್ತದೆ. ನೀವೆಲ್ಲಾ ಯಾವುದೇ ಕಾರಣಕ್ಕೂ ಡಿಕೆಶಿಯವರನ್ನು ಬಿಟ್ಟುಕೊಡಬಾರದು. ರಾಜ್ಯದ ರಾಜಕಾರಣದ ತಿರುವು ಚನ್ನಪಟ್ಟಣ ಕ್ಷೇತ್ರದಿಂದ ಶುರುವಾಗುತ್ತದೆ ಎಂದು ಹೇಳಿದರು.
ಶಾಸಕ ಶಿವಲಿಂಗೇಗೌಡ ಹೇಳಿಕೆಯಿಂದ ಕಾಂಗ್ರೆಸ್ ಪಾಳಯದಲ್ಲಿ ಭಾರೀ ಸಂಚಲನ ಶುರುವಾಗಿದ್ದು, ಮುಂದಿನ ಸಿಎಂ ಡಿಕೆಶಿ ಎಂಬ ಮಾತುಗಳು ಕೇಳಿಬರುತ್ತಿವೆ.
ಮೈಸೂರು ಮುಡಾ ಹಗರಣ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಶಿವಲಿಂಗೇಗೌಡ ಈ ಹೇಳಿಕೆ ನೀಡಿರುವುದು ಭಾರೀ ಸಂಚಲನ ಸೃಷ್ಟಿಸಿದಂತಾಗಿದೆ.





