ಬೆಳಗಾವಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿ ಆಡಳಿತ ನಡೆಸುತ್ತಿರುವಾಗ ಸಿಎಂ ಬದಲಾವಣೆ ಆವಶ್ಯಕತೆ ಇಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಇಂದು (ಫೆ.18) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ತೆಗೆಯಬೇಕು ಎಂದು ಯಾರೂ ಹೇಳುತ್ತಿಲ್ಲ, ಅದರ ಆವಶ್ಯಕತೆಯೂ ಇಲ್ಲ. ಸಿಎಂ ಇರುವಾಗ ಈ ಚರ್ಚೆ ಯಾಕೆ? ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದಲ್ಲಿ ಬಿರುಕಿಲ್ಲ, ಪ್ರತಿಷ್ಠೆ ಇದೆ. ಆದರೆ, ಬಿಜೆಪಿಯಲ್ಲಿ ಪ್ರತಿಷ್ಠೆ ಭಿನ್ನಭಿಪ್ರಾಯವಿಲ್ಲ, ಸಂಪೂರ್ಣ ಬಿರುಕಿದೆ. ನಮ್ಮಲ್ಲಿ ಎಲ್ಲಾ ಸಚಿವರು, ಶಾಸಕರು ಚೆನ್ನಾಗಿದ್ದೇವೆ. ಕೆಲ ವಿಷಯದಲ್ಲಿ ಪ್ರತಿಷ್ಠೆಯಿಂದ ಏನೇನೋ ಮಾತನಾಡುತ್ತಾರೆ ಎಂದರು.





