Mysore
30
scattered clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಕರ್ನಾಕಟಕ್ಕೆ ನೀಡಬೇಕಾದ ಬಾಕಿ ಯಾವುದೂ ಉಳಿದಿಲ್ಲ: ಸಚಿವೆ ನಿರ್ಮಲಾ ಸೀತಾರಾಮನ್‌

ಬೆಂಗಳೂರು: ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ನೀಡಬೇಕಾದ ಯಾವುದೇ ಬಾಕಿ ಉಳಿದಿಲ್ಲ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ರಾಜ್ಯಕ್ಕೆ ಬರ ಪರಿಹಾರಕ್ಕೆ ಸಂಬಂಧಪಟ್ಟಂತೆ ಹಣ ಬಿಡುಗಡೆ ಮಾಡಲು ಎನ್ ಡಿ ಆರ್ ಎಫ್‌ನ ಒಂದು ಕಮಿಟಿ ಇದೆ. ಆ ಕಮಿಟಿ ನಿರ್ಧಾರ ಮಾಡುತ್ತದೆ. ನರೇಂದ್ರ ಮೋದಿಯವರು ಪ್ರಧಾನಿ ಆಗುವ ಮುನ್ನ 10 ವರ್ಷ ಕಾಲ ಗುಜರಾತ್ ಮುಖ್ಯಮಂತ್ರಿಯಾಗಿದ್ದವರು. ಹೀಗಾಗಿ ಅವರಿಗೆ ಕೇಂದ್ರದಿಂದ ಹಣವನ್ನು ಸೂಕ್ತ ಕಾಲಕ್ಕೆ ನೀಡುವುದು ಹೇಗೆಂಬುದು ಗೊತ್ತಿದೆ.

ಬರ ಪರಿಹಾರದ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯದ ಕೃಷಿ, ಕಂದಾಯ ಸಚಿವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದರೂ, ಆ‌ ಪತ್ರ ನನಗೆ ತಲುಪುವ ಮುನ್ನವೇ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಾರೆ. ಬೆಂಗಳೂರಿನಲ್ಲಿ ಮಾತ್ರ ಈ ವಿಚಾರವನ್ನು ಹೇಳುತ್ತಿಲ್ಲ. ಎರಡು ದಿನಗಳ ಹಿಂದೆ, ಕೇರಳದಲ್ಲಿದ್ದಾಗಲೂ ಹೀಗೆ ಹೇಳಿದ್ದೇನೆ. ನಮ್ಮ ಕಡೆಯಿಂದ ಕರ್ನಾಟಕಕ್ಕೆ ಏನೂ ಬಾಕಿ ಇಲ್ಲ ಎಂದ ಅವರು, ನಾನು ರಾಜ್ಯದ ಸಂಸದೆಯಾಗಿದ್ದು, ನನಗೂ ಜವಾಬ್ದಾರಿ ಇದೆ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರದ ಪತ್ರಕ್ಕೆ ನಾನು ಕಾಯುತ್ತಿದ್ದೇನೆ. ಅಕೌಂಟೆಂಟ್ ಜನರಲ್ ಸಹಿ ಇಲ್ಲದೆ ಹಣ ಕಳಿಸೋಕೆ ಸಾಧ್ಯನಾ? ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದರು. ಕರ್ನಾಟಕಕ್ಕೆ ಬರ ಪರಿಹಾರಕ್ಕಾಗಿ ಎನ್‌ ಡಿಆರ್ ಎಫ್ ಹಣ ಬಿಡುಗಡೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸೀತಾರಾಮನ್, “ಎನ್‌ ಡಿಆರ್ ಎಫ್‌ ಗಾಗಿ ಒಂದು ಸಮಿತಿ ಇದೆ. ಗೃಹ ಸಚಿವ ಅಮಿತ್ ಶಾ ಅದನ್ನು ಪರಿಶೀಲಿಸುತ್ತಾರೆ. ಈ ಸಂಬಂಧ ಕೃಷ್ಣ ಬೈರೇಗೌಡ ಭೇಟಿ ಮಾಡಿದ್ದು, ಅವರಿಗೆ ವಿವರಿಸಿದ್ದೇನೆ ಎಂದರು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ