Mysore
25
few clouds

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ಕಾರ್ಮಿಕರ ಮಕ್ಕಳಿಗೆ ಲ್ಯಾಪ್‌ಟಾಪ್, ಟ್ಯಾಬ್ ಕೊಡಲು ದುಡ್ಡಿನ ಕೊರತೆ ಇದೆ : ಸಂತೋಷ್‌ ಲಾಡ್

ಹಾವೇರಿ‌ : ನಮ್ಮ ಇಲಾಖೆಯ ರಿವ್ಯೂವ್ ಮಾಡ್ತಾ ಇದ್ದೀವಿ. ನಾಲ್ಕು ಕೋಟಿ ವೆಚ್ಚದಲ್ಲಿ ಹಿರೇಕೆರೂರಿನಲ್ಲಿ ಕಾರ್ಮಿಕ ಭವನ ಉದ್ಘಾಟನೆ ಕೂಡಾ ಮಾಡಲಿದ್ದೇವೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.

ಜಿಲ್ಲೆಯ ಹಿರೆಕೇರೂರ ಪಟ್ಟಣ ಶಾಸಕ ಯು.ಬಿ ಬಣಕಾರ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಲ್ಕು ಕೋಟಿ ವೆಚ್ಚದಲ್ಲಿ ಹಿರೆಕೇರೂರಲ್ಲಿ ಕಾರ್ಮಿಕ ಭವನ ಉದ್ಘಾಟನೆ ಮಾಡಲಿದ್ದೇವೆ. ಭವನ ನಿರ್ಮಿಸಲು ಒತ್ತಾಯ ಮಾಡ್ತಾ ಇರೋರು ಬಳಿಕ ಅವರೇ ಮೆಂಟೆನ್ ಮಾಡಬೇಕು. ಜನರೇ ಸರ್ಕಾರದ ಮುಂದೆ ಬೇಡಿಕೆ ಇಡುತ್ತಾರೆ. ಹೀಗಾಗಿ ಜನರು ಎಚ್ಚೆತ್ತುಕೊಳ್ಳಬೇಕು, ಇದರಲ್ಲಿ ಅವರದ್ದು ಜವಾಬ್ದಾರಿ ಇದೆ. ರಸ್ತೆಯಲ್ಲಿ ಡಾಂಬರ್ ಹಾಕಲಾಗಿರುತ್ತದೆ ಪಕ್ಕದಲ್ಲೆ ಕೇಸರು ಇರುತ್ತದೆ. ಅದನ್ನು ಸಲಾಕೆಯಿಂದ ಎತ್ತಿ ಹಾಕೊಲ್ಲಾ ಜನರು ಹಾಗೇ ಹೋಗ್ತಾರೆ ಎಂದು ಉದಾಹರಣೆ ಮೂಲಕ ಜನರಿಗೆ ತಿಳಿ ಹೇಳಿದ್ದಾರೆ.

ರಾಜ್ಯದಲ್ಲಿ ಕಾರ್ಮಿಕ ಇಲಾಖೆಯಲ್ಲಿ ಬೋಗಸ್ ಕಾರ್ಡ್ ಗಳ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ 45 ಲಕ್ಷ ಕಾರ್ಡ್ ಗಳು ಕಾರ್ಮಿಕ ಇಲಾಖೆಯಲ್ಲಿ ಇದೆ. 60% ರಿಂದ 70% ನಕಲಿ ಕಾರ್ಡ್ ಗಳು ಇದ್ದಾವೆ. ಫೇಕ್ ಕಾರ್ಡ್ ಗಳನ್ನೂ ಹುಡುಕಿ ತೆಗೆದು ಹಾಕುತ್ತೇವೆ ಎಂದು ಹೇಳಿದ್ದಾರೆ.

ನಮ್ಮ ಇಲಾಖೆಯಲ್ಲಿ ದುಡ್ಡು ಇದೆ ಎಂದು ಫೇಕ್ ಕಾರ್ಡ್ ಮಾಡಿಕೊಂಡು ಅರ್ಜಿ ಹಾಕಿದ್ದಾರೆ. ಅದನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದೇವೆ. ಹೆಚ್ಚಿನ ಲ್ಯಾಪ್‌ಟಾಪ್ ಹಾಗೂ ಟ್ಯಾಬ್ ಕೊಡುವುದಕ್ಕೆ ನಮ್ಮಲ್ಲಿ ದುಡ್ಡಿನ ಕೊರತೆ ಇದೆ. ಮುಂದೆ ಇಲಾಖೆಯಲ್ಲಿ ಕಾರ್ಮಿಕರಿಗೆ ಅನೇಕ ಯೋಜನೆಗಳನ್ನು ತರುತ್ತಿದ್ದೇವೆ ಎಂದು ಭರವಸೆ ನೀಡಿದ್ದಾರೆ.

ಸಿಎಂ ಹಾಗೂ ಡಿಸಿಎಂ ಇಬ್ಬರ ಬಣ ರಾಜಕೀಯ ವಿಚಾರವಾಗಿ ಸ್ಪಷ್ಟನೆ ನೀಡಿದ ಅವರು, ನಾನು ಕ್ಲೀಯರ್ ಮಾಡುತ್ತಾ ಇದೀನಿ. ಇನ್ನೂ ಮುಂದೆ ಈ ಪ್ರಶ್ನೆಗೆ ನಾನು ಉತ್ತರ ಕೊಡೋದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!