ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ಮನೆ ಬಳಿಯೇ ಖದೀಮ ತನ್ನ ಕೈಚಳಕ ತೋರಿಸಿರುವ ಘಟನೆ ನಡೆದಿದೆ.
ಸಿಎಂ ಸಿದ್ದರಾಮಯ್ಯ ಮನೆಯ ಕೂಗಳತೆ ದೂರದಲ್ಲಿ ಕುಮಾರಕೃಪಾ ವೆಸ್ಟ್‌ನಲ್ಲಿ ಹಾಡುಹಗಲೇ ಕಳ್ಳತನ ನಡೆದಿದೆ.
ಕಾಂಪೌಂಡ್ ಜಿಗಿದು ಬಂದು ಸಂಪ್ ಮುಚ್ಚಳ ಕದ್ದು ಮರೆಯಲ್ಲಿಟ್ಟ ಭೂಪ, ಜನರ ಓಡಾಟ ಕಡಿಮೆಯಾದ ಬಳಿಕ ಮತ್ತೆ ಅಲ್ಲಿಗೆ ಬಂದು ಅದನ್ನು ಕದ್ದೊಯ್ದಿದ್ದಾನೆ.
ಇದನ್ನೂಓದಿ:- ಟಿ.ನರಸೀಪುರ| ಹಾಲಿನ ಟ್ಯಾಂಕರ್ ಹಾಗೂ ಬೈಕ್ ನಡುವೆ ಡಿಕ್ಕಿ: ವ್ಯಕ್ತಿ ಸ್ಥಳದಲ್ಲೇ ಸಾವು
ಖದೀಮನ ಕೈಚಳಕ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ಸಂಬಂಧ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





