ಬೆಂಗಳೂರು : ಕಾವೇರಿ ನೀರಿನ ದರ ಏರಿಕೆ ಪ್ರಸ್ತಾಪವನ್ನು ರಾಜ್ಯ ಸರ್ಕಾರ ಮುಂದೂಡಿದ್ದು, ಈ ಮೂಲಕ ಬೆಂಗಳೂರಿನ ಜನತೆಗೆ ಬಿಗ್ ರಿಲೀಫ್ ಸಿಕ್ಕಿದೆ.
ಪೆಟ್ರೋಲ್ ಡೀಸೆಲ್ ನಂದಿನಿ ಹಾಲಿನ ದರ ಏರಿಕೆ ಬೆನ್ನಲ್ಲೆ ಕಾವೇರಿ ನೀರಿನ ದರವೂ ಏರಿಕೆಯಾಗುತ್ತೆ ಎಂದು ಬೆಂಗಳೂರಿಗರು ಒಂದು ರೀತಿ ಆತಂಕಗೊಂಡಿದ್ದರು. ಶೇ 40ರಿಂದ 45 ರಷ್ಟು ಗೃಹ ಹಾಗೂ ಗೃಹೇತರ ನೀರಿನ ದರ ಏರಿಕೆಗೆ ಪ್ರಸ್ತಾವನೆಯನ್ನು ಜಲಮಂಡಳಿ ಸರ್ಕಾರದ ಮುಂದಿಟ್ಟಿತ್ತು. ಆದ್ರೆ ಬೆಂಗಳೂರಿಗರ ಆಕ್ರೋಶಕ್ಕೆ ಗುರಿಯಾಗುವ ಆತಂಕದಿಂದ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿದು ಸದ್ಯಕ್ಕೆ ನೀರಿನ ದರ ಏರಿಕೆ ಬೇಡ ಎಂದು ಜಲಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದೆ.