Mysore
21
broken clouds

Social Media

ಗುರುವಾರ, 01 ಜನವರಿ 2026
Light
Dark

ಸಾರಿಗೆ ನೌಕರರಿಗೆ ಬಿಗ್‌ ಶಾಕ್‌ ಕೊಟ್ಟ ರಾಜ್ಯ ಸರ್ಕಾರ

ಬೆಂಗಳೂರು: ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತೆ ರಾಜ್ಯ ಸರ್ಕಾರ ಸಾರಿಗೆ ನೌಕರರಿಗೆ ಬಿಗ್‌ ಶಾಕ್‌ ನೀಡಿದೆ.

2026ರ ಜನವರಿ.1ರಿಂದ ಮುಂದಿನ ಆರು ತಿಂಗಳವರೆಗೆ ಮುಷ್ಕರ ಮಾಡದಂತೆ ಸರ್ಕಾರ ಸಾರಿಗೆ ನೌಕರರಿಗೆ ಅಧಿಸೂಚನೆ ಹೊರಡಿಸಿದೆ. ಯಾವುದೇ ಸಂದರ್ಭದಲ್ಲಿಯೂ ಕೂಡ ಮುಷ್ಕರ ಮಾಡದಂತೆ ಸೂಚನೆ ನೀಡಿದೆ.

ಇದಕ್ಕೂ ಮುನ್ನ ನೀಡಿದ್ದ ಅಧಿಸೂಚನೆ 2025ರ ಡಿಸೆಂಬರ್.‌31ಕ್ಕೆ ಕೊನೆಯಾದ ಹಿನ್ನೆಲೆಯಲ್ಲಿ ಈಗ ಮುಷ್ಕರ ನಿರ್ಬಂಧಿಸಿ ಆದೇಶ ಹೊರಡಿಸಿದೆ. ಸರ್ಕಾರದ ಆದೇಶ ಉಲ್ಲಂಘಿಸಿದಲ್ಲಿ ಎಸ್ಮಾ ಜಾರಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದು, ಆದೇಶದ ಪ್ರತಿಯನ್ನು ಸಂಸ್ಥೆಯ ಎಲ್ಲಾ ಘಟಕಗಳು ಹಾಗೂ ನೌಕರರ ಗಮನಕ್ಕೆ ತರುವಂತೆ ಸೂಚನೆ ನೀಡಲಾಗಿದೆ.

 

Tags:
error: Content is protected !!