Mysore
21
overcast clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

75ನೇ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಸಾರೋಟಿನಲ್ಲಿ ಆಗಮಿಸಿದ ರಾಷ್ಟ್ರಪತಿ!

ನವದೆಹಲಿ : 75೭ನೇ ಗಣರಾಜ್ಯೋತ್ಸವ ಸಂಭ್ರಮ ದೇಶಾದ್ಯಂತ ಮನೆ ಮಾಡಿದೆ. ಈಬಾರಿ ಗಣರಾಜ್ಯೋತ್ಸವದಲ್ಲಿ ಹಲವಾರು ವಿಶೇಷತೆಗಳು ಗಮನ ಸೆಳೆಯುತ್ತಿವೆ.

ಪ್ರತಿವರ್ಷ ವಿಶೇಷ ಕಾರಿನಲ್ಲಿ ಕರ್ತವ್ಯ ಪಥ ಮಾರ್ಗದಲ್ಲಿ ಆಗಮಿಸುತ್ತಿದ್ದ ರಾಷ್ಟ್ರಪತಿಗಳು ಈಬಾರಿ ಸಾರೋಟಿನಲ್ಲಿ ಆಗಮಿಸಿದ್ದು ವಿಶೇಷ.

ಈ ಬಾರಿಯ ಗಣತಂತ್ರ ದಿವಸ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ವಿಶೇಷವಾದ ದಿನವಾಗಿದೆ. 40 ವರ್ಷಗಳ ಬಳಿಕ ರಾಷ್ಟ್ರಪತಿಗಳು ಸಾರೋಟಿನಲ್ಲಿ ಗಣರಾಜ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.

ಗಣರಾಜ್ಯೋತ್ಸವ ಸಮಾರಂಭಕ್ಕೆ ಕರ್ತವ್ಯ ಪಥದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಸಾರೋಟಿನಲ್ಲಿ ಕುಳಿತು ಸಾಗಿದ್ದು ಎಲ್ಲರ ಗಮನ ಸೆಳೆಯಿತು.

ಅಲ್ಲದೇ 250 ವರ್ಷಗಳ ಕಾಲ ಸೇವೆ ಪೂರೈಸಿದ ಅಂಗರಕ್ಷಕರು 1773ರಲ್ಲಿ ಆರಂಭವಾದ ಆರಂಭವಾದ ರಾಷ್ಟ್ರಪತಿಗಳ ಅಂಗರಕ್ಷಕ ದಳ ಇದೇ ಮೊದಲ ಬಾರಿಗೆ ರಾಷ್ಟ್ರ ಧ್ವಜ ಹಿಡಿದು ಸಾಗಿದ್ದು ಮತ್ತೊಂದು ವಿಶೇಷ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ