ಬೆಂಗಳೂರು: ಪಂಚರಾಜ್ಯಗಳ ಚುನಾವಣೆ ಸೆಮಿಫೈನಲ್ ಎಂದು ಅನೇಕರು ವ್ಯಾಖ್ಯಾನ ಮಾಡುತ್ತಿದ್ದರು. ಈ ಸೆಮಿಫೈನಲ್‌ನಲ್ಲಿ ವಾತಾವರಣ ಸುನಾಮಿ ರೀತಿಯಲ್ಲಿ ಬಿಜೆಪಿ ಅಲೆ ಎದ್ದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಭಿಪ್ರಾಯ ತಿಳಿಸಿದ್ದಾರೆ.
ಪಂಚರಾಜ್ಯ ಚುನಾವಣ ಫಲಿತಾಂಶದ ಬಗ್ಗೆ ಮಾತನಾಡಿದ ಅವರು, ನಾಲ್ಕು ರಾಜ್ಯದಲ್ಲಿ ನಮಗೆ ಬಂದಿರುವ ವಿಜಯ ಇಲ್ಲಿಗೆ ನಿಲ್ಲುವುದಿಲ್ಲ. ಮುಂದೆ ಲೋಕಸಭಾ ಚುನಾವಣೆ ಮೋದಿ ಪ್ರಧಾನಿ ಆಗುವ ಮೂಲಕ ಬಿಜೆಪಿ ಬಹುಮತ ಸಾಭಿಸುತ್ತದೆ ಎಂಬುದರಲಿ ಅನುಮಾನ ಇಲ್ಲ ಎಂದರು.
ದೇಶದ ಜನ ದೇಶದ ರಕ್ಷಣೆ ಗ್ಯಾರಂಟಿ ಬಯಸುತ್ತಿದ್ದಾರೆ ಹೊರತು, ಅಧಿಕಾರ ಕಬಳಿಸುವ ಆಮಿಶದ ಗ್ಯಾರೆಂಟಿ ಅಲ್ಲ ಎಂಬುದು ಫಲಿತಾಂಶದ ಮೂಲಕ ತಿಳಿದಿದೆ. ರಾಜ್ಯದಲ್ಲಿ ೬ ತಿಂಗಳ ಕಾಂಗ್ರೆಸ್ ಸರ್ಕಾರ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಅವರ ಕಾರ್ಯ ವೈಕರಿ ನೋಡಿ ರಾಜ್ಯದ ಜನರು ಬೇಸತ್ತಿದ್ದಾರೆ ಎಂದರು.
ಲೋಕಸಭಾ ಚುನಾವಣೆ ರಾಜ್ಯದ ೨೮ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ಪ್ರಧಾನಿ ಮೋದಿ ಅವರ ಕೈ ಭಲ ಪಡಿಸುತ್ತೇವೆ ಎಂದರು.





