Mysore
24
overcast clouds

Social Media

ಭಾನುವಾರ, 22 ಫೆಬ್ರವರಿ 2026
Light
Dark

ಗಣರಾಜ್ಯೋತ್ಸವ ಪೆರೆಡ್‌ನಲ್ಲಿ ಯುದ್ಧ ವಿಮಾನ ಹಾರಿಸಲಿರುವ ಏಕೈಕ ಕನ್ನಡತಿ!

ಮೈಸೂರು: ಗಣರಾಜ್ಯೋತ್ಸವದ ಅಂಗವಾಗಿ ದೆಹಲಿಯಲ್ಲಿ ನಡೆಯಲಿರುವ ಪೆರೆಡ್‌ನಲ್ಲಿ ಕನ್ನಡತಿ ಪುಣ್ಯಾ ನಂಜಪ್ಪ ಯುದ್ಧ ವಿಮನಾ ಮಿಗ್‌-೨೯ ಹಾರಿಸಲಿದ್ದಾರೆ.

ಜನವರಿ ೨೬ರಂದು ನಡೆಯಲಿರುವ ಪೆರೆಡ್‌ನಲ್ಲಿ ಕರ್ನಾಟಕದ ರಾಜ್ಯದ ಕೊಡಗಿನ ಕುವರಿ, ರಾಜ್ಯದ ಏಕೈಕ ಮಹಿಳಾ ಪೈಲೆಟ್‌ ಪುಣ್ಯಾ ನಂಜನಪ್ಪ ಯುದ್ಧ ವಿಮಾನ ಹಾರಿಸುವ ಮೂಲಕ ಸಾಹಸ ಮೆರೆಯಲಿದ್ದಾರೆ.

 

ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಪುಣ್ಯಾ ನಂಜಪ್ಪ ಅವರು, ಗಣರಾಜ್ಯೋತ್ಸವ ಪೆರೆಡ್‌ನಲ್ಲಿ ವಿಮಾನ ಹಾರಿಸುವುದು ನನ್ನ ಬಹುದಿನದ ಬಯಕೆಯಾಗಿತ್ತು ಎಂದು ಹೇಳಿದ್ದಾರೆ.

ಯುದ್ಧ ವಿಮಾನ ಹಾರಿಸುವುದು ನನ್ನ ಜೀವನದ ಕನಸು. ಈಗ ನನ್ನ ಕನಸ್ಸು ನನಸಾಗುತ್ತಿದೆ. ಅದರಲ್ಲೂ ಈತಿಹಾಸಿಕ ದಿನವಾದ ಗಣರಾಜ್ಯೋತ್ಸವದ ದಿನವೇ ಯುದ್ಧ ವಿಮಾನ ಹಾರಿಸುತ್ತಿರುವುದು ನನಗು ಹಾಗೂ ನನ್ನ ಕುಟುಂಬದವರಿಗೆ ತುಂಬಾ ಹೆಮ್ಮೆಯ ವಿಚಾರವಾಗಿದೆ ಎಂದು ಹೇಳಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!