ಚನ್ನಪಟ್ಟಣ: ಕುಮಾರಸ್ವಾಮಿ ಮತ್ತು ಅವರ ಕುಟುಂಬ ಮಾಡಿರುವ ಆಸ್ತಿ ಮೊತ್ತವು ರಾಜ್ಯದ ಮೂರು ಬಜೆಟ್ ಮಂಡಿಸುವಷ್ಟಿದೆ. ಅಷ್ಟೊಂದು ಭೂಮಿ ಮತ್ತು ಹಣ ಕೊಳ್ಳೆ ಹೊಡೆದಿದ್ದಾರೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಆರೋಪ ಮಾಡಿದರು.
ನಗರದ ಬಾಲಕರ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಪಕ್ಷದ ಮೂರನೇ ದಿನದ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿದ ಅವರು, ಭಾಷಣದ ಉದ್ದಕ್ಕೂ ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿದರು.
ನಾನು ಜೆಡಿಎಸ್‌ನಲ್ಲಿದ್ದಾಗ ದಿನದ 16 ತಾಸು ಅವರೊಂದಿಗೆ ಇರುತ್ತಿದೆ. ಆದರೆ, ಅವರ ಪ್ಯಾಂಟೊಳಗಿರುವ ಖಾಕಿ ಚಡ್ಡಿ ವಿಷಯವೇ ಗೊತ್ತಾಗಲಿಲ್ಲ. ಬಿಜೆಪಿಗಿಂತ ಹೆಚ್ಚು ಕೋಮುವಾದ ತುಂಬಿಕೊಂಡಿರುವ ಅವರನ್ನ ನಂಬಬಾರದು ಎಂದು ವ್ಯಂಗವಾಡಿದರು.
ಜೆಡಿಎಸ್ ಬರಿ ಡವ್ ಮಾಡಿಕೊಂಡು ಗೆಲ್ಲುತ್ತಾ ಬಂದಿದೆ ಹೊರತು ಕೆಲಸ ಮಾಡಿಲ್ಲ. ಮುಡಾ ವಿಷಯದಲ್ಲಿ ಸಿದ್ದರಾಮಯ್ಯ ಅವರು ಎಳ್ಳಷ್ಟು ತಪ್ಪೆಸಗಿಲ್ಲ. ಅವರ ಕುರ್ಚಿ ಅಲ್ಲಾಡಿಸಲು ಯಾವ ನನ್ನ ಮಗನಿಂದಲೂ ಸಾಧ್ಯವಿಲ್ಲ ಎಂದು ಜಮೀರ್ ಆಕ್ರೋಶ ವ್ಯಕ್ತಪಡಿಸಿದರು.